ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ತಿಂಗಳಲ್ಲಿ 14 ಪರ್ವತಗಳನ್ನು ಏರುವ ಗುರಿ ಹಾಕಿಕೊಂಡ ನಾರ್ವೆಯ ಪರ್ವತಾರೋಹಿ

Published 6 ಜೂನ್ 2023, 14:29 IST
Last Updated 6 ಜೂನ್ 2023, 14:29 IST
ಅಕ್ಷರ ಗಾತ್ರ

ಕಠ್ಮಂಡು: ವೇಗದ ಪರ್ವತಾರೋಹಿ ಖ್ಯಾತಿಯ, ನಾರ್ವೆಯ ಕ್ರಿಸ್ಟಿನ್‌ ಹರಿಲಾ ಅವರು ವಿಶ್ವದ ಅತಿ ಎತ್ತರದ 14 ಪರ್ವತಗಳನ್ನು ಕೇವಲ ಮೂರು ತಿಂಗಳಲ್ಲಿ ಏರುವ ಹೊಸ ಗುರಿಯನ್ನು ಹಾಕಿಕೊಂಡಿದ್ದಾರೆ.

37ರ ಹರೆಯದ ಕ್ರಿಸ್ಟಿನ್ ಹರಿಲಾ ಅವರು ಹಿಮಾಲಯ ಪರ್ವತಗಳಿಂದ ಮಂಗಳವಾರ ನೇಪಾಳದ ರಾಜಧಾನಿಗೆ ಮರಳಿದ್ದಾರೆ. ಮೂರು ತಿಂಗಳಲ್ಲಿ 14 ಶಿಖರಗಳನ್ನು ಏರುವ ಹೊಸ ಗುರಿಯನ್ನು ಪ್ರಕಟಿಸಿದ ಅವರು, ಈಗಾಗಲೇ 40 ದಿನಗಳಲ್ಲಿ ಈ ಪೈಕಿ ಎಂಟು ಶಿಖರಗಳನ್ನು ಏರಿರುವುದಾಗಿ ತಿಳಿಸಿದ್ದಾರೆ. ಈ ಗುರಿಗೆ ಪ್ರಾರಂಭದಲ್ಲಿ ಯೋಜಿಸಿದ್ದ ಅವಧಿಗಿಂತಲೂ ಮೊದಲೇ ಸಾಧಿಸುವುದಾಗಿಯೂ ಅವರು ಮಂಗಳವಾರ ಹೇಳಿದ್ದಾರೆ. 

 ನೇಪಾಳ ಮೂಲದ ಬ್ರಿಟಿಷ್‌ ಪ್ರಜೆ ನಿರ್ಮಲ್‌ ಪುರ್ಜಾ 2019ರಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿಯಲು ಹರಿಲಾ ಪ್ರಯತ್ನಿಸುತ್ತಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT