ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಂಗಾ: ಸುನಾಮಿ ಆತಂಕ ದೂರ

Tonga
Last Updated 16 ಜನವರಿ 2022, 13:13 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌:ಟೊಂಗಾ ದ್ವೀಪದ ಸಮೀಪ ಪೆಸಿಫಿಕ್‌ ಸಾಗರದಾಳದಲ್ಲಿ ಸ್ಫೊಟಿಸಿದ್ದ ಜ್ವಾಲಾಮುಖಿಯಿಂದ ಸುನಾಮಿ ಅಪ್ಪಳಿಸುವ ಸಾಧ್ಯತೆ ಕಡಿಮೆಯಾಗಿದ್ದು, ಜ್ವಾಲಾಮುಖಿಯಿಂದ ಮೇಲೆದ್ದ ಬೂದಿ ಸಾಗರದ ಮೇಲ್ಭಾಗದಲ್ಲೂ ಹರಡಿಕೊಂಡಿರುವುದರಿಂದ ಮೇಲ್ವಿಚಾರಣಾ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ.

ಶನಿವಾರ ಸಂಜೆ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ನೀಲ ಸಾಗರದ ಮೇಲ್ಭಾಗದಲ್ಲಿ ಕಂಡುಬಂದ ಬೂದಿಯ ರಾಶಿಯ ದೃಶ್ಯಗಳು ಉಪಗ್ರಹ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸುನಾಮಿ ಅಪ್ಪಳಿಸದಿದ್ದರೂ ಬೃಹತ್‌ ತೆರೆಗಳು ಸೃಷ್ಟಿಯಾಗಿದ್ದು, ಟೊಂಗಾ ದ್ವೀಪರಾಷ್ಟ್ರದ ಕೆಲವೆಡೆ ದೋಣಿಗಳು ಮುಗುಚಿ ಬಿದ್ದಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಆದರೆ ಎಷ್ಟರ ಮಟ್ಟಿಗೆ ಹಾನಿ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಸಾವು, ನೋವು, ಹಾನಿಯ ವಿವರ ಇದುವರೆಗೆ ಲಭಿಸಿಲ್ಲ ಎಂಧು ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂದಾ ಆರ್ಡೆನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT