ಇಸ್ಲಾಮಾಬಾದ್/ಕಾಬೂಲ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವೆ 48 ಗಂಟೆಗಳ ಕದನ ವಿರಾಮ ಏರ್ಪಟ್ಟರೂ ಗಡಿಯಲ್ಲಿ ಗುಂಡಿನ ಕಾಳಗ ಮುಂದುವರೆದಿದ್ದು ಸೈನಿಕರು ಮತ್ತು ನಾಗರಿಕರು ಸೇರಿ 12 ಜನರು ಮೃತಪಟ್ಟಿದ್ದಾರೆ.

ತಾಲಿಬಾನಿಗಳ ಮನವಿಯ ನಂತರ ಪಾಕಿಸ್ತಾನ ಸರ್ಕಾರ ಮತ್ತು ತಾಲಿಬಾನ್ ಆಡಳಿತದ ಅಫ್ಗಾನಿಸ್ತಾನ ಸರ್ಕಾರ ಬುಧವಾರ ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳವರೆಗೆ ತಾತ್ಕಾಲಿಕ ಕದನ ವಿರಾಮಕ್ಕೆ ನಿರ್ಧರಿಸಿದವು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿತ್ತು.

ಆದಾಗ್ಯೂ ಗಡಿಯಲ್ಲಿ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಉಭಯ ದೇಶಗಳ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ನಾಗರಿಕರು ಸೇರಿ ಯೋಧರು ಹತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್ ನಡೆಸಿದ ಹಲವಾರು ದಾಳಿಗಳನ್ನು ತಾನು ಹಿಮ್ಮೆಟ್ಟಿಸಿರುವುದಾಗಿ ಪಾಕಿಸ್ತಾನ ಸೇನೆ ಬುಧವಾರ ಹೇಳಿಕೊಂಡಿತ್ತು. ಅಲ್ಲದೆ, ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯ ಪ್ರತ್ಯೇಕ ಘಟನೆಗಳಲ್ಲಿ ತಾನು 40ಕ್ಕೂ ಹೆಚ್ಚು ದಾಳಿಕೋರರನ್ನು ಕೊಂದಿರುವುದಾಗಿ ತಿಳಿಸಿದೆ.

ತಾಲಿಬಾನ್ ಕೂಡ ಗಡಿಯಲ್ಲಿ ಪಾಕಿಸ್ತಾನದ ಹಲವು ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.