ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಗೆಳೆಯನ ಮದುವೆಯಾದ ಅಂಜು ವೀಸಾ ಅವಧಿ ವಿಸ್ತರಣೆ

Published 8 ಆಗಸ್ಟ್ 2023, 14:13 IST
Last Updated 8 ಆಗಸ್ಟ್ 2023, 14:13 IST
ಅಕ್ಷರ ಗಾತ್ರ

ಪೇಶಾವರ: ಪಾಕಿಸ್ತಾನಕ್ಕೆ ತೆರಳಿ ಫೇಸ್‌ಬುಕ್‌ ಗೆಳೆಯನನ್ನು ವರಿಸಿರುವ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾವನ್ನು ಅಲ್ಲಿನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ.  

ಇಸ್ಲಾಂಗೆ ಮತಾಂತರವಾಗಿರುವ 34 ವರ್ಷದ ಅಂಜು ಈಗ ಫಾತಿಮಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದು, ಜುಲೈ 25ರಂದು ಖೈಬರ್‌ ಫಖ್ತುಂಕ್ವಾದ 29 ವರ್ಷದ ನಸ್ರುಲ್ಲಾ ಅವರನ್ನು ವಿವಾಹವಾಗಿದ್ದಾರೆ.  

‘ಅಂಜು ಮೂಲ ವೀಸಾ ಆಗಸ್ಟ್‌ 20ಕ್ಕೆ ಅಂತ್ಯವಾಗುತ್ತದೆ. ಈಗಾಗಲೇ ಎರಡು ತಿಂಗಳ ವಿಸ್ತರಣೆ ದೊರೆತಿತ್ತು. ಮದುವೆ ನಂತರ ವೀಸಾವನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪಾಕಿಸ್ತಾನದ ಎಲ್ಲ ಸಂಸ್ಥೆಗಳೂ ನಮಗೆ ಸಹಕಾರ ನೀಡುತ್ತಿವೆ’ ಎಂದು ಆಕೆಯ ಪತಿ ನಸ್ರುಲ್ಲಾ ಮಂಗಳವಾರ ತಿಳಿಸಿದ್ದಾರೆ. 

ದಂಪತಿಗೆ ಕಳೆದ ತಿಂಗಳು ಪಾಕಿಸ್ತಾನದ ರಿಯಲ್‌ ಎಸ್ಟೇಟ್‌ ಕಂಪನಿಯೊಂದು ಖೈಬರ್‌ ಫಖ್ತುಂಕ್ವಾದಲ್ಲಿ ನಿವೇಶನವನ್ನು ಉಡುಗೊರೆಯಾಗಿ ನೀಡಿತ್ತು.  

ಅಂಜು ಉತ್ತರ ಪ್ರದೇಶದ ಕೈಲೋರ್‌ನವರಾಗಿದ್ದು, ರಾಜಸ್ಥಾನದ ಆಲ್ವಾರ್‌ ಜಿಲ್ಲೆಯ ಅರವಿಂದ್‌ ಎಂಬುವವರನ್ನು ಮೊದಲಿಗೆ ಮದುವೆಯಾಗಿದ್ದರು. ಅವರಿಗೆ ಎರಡು ಮಕ್ಕಳಿವೆ. 2019ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಅಂಜು ವಾಘಾ ಗಡಿಯ ಮೂಲಕ ಕಾನೂನು ಬದ್ಧವಾಗಿಯೇ ಜುಲೈನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಅವರಿಗೆ ಆರಂಭದಲ್ಲಿ 30 ದಿನಗಳ ವೀಸಾ ನೀಡಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT