ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಮತ್ತು ವಿರೋಧ ಪಕ್ಷ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಮಧ್ಯೆ ಸೋಮವಾರ ನಡೆದ ಚೊಚ್ಚಲ ಸಭೆಯಲ್ಲಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆ ಸೇರಿದಂತೆ ಹಲವು ವಿವಾದಿತ ವಿಷಯಗಳ ಬಗ್ಗೆ ಮಾತುಕತೆ ನಡೆಸಲು ಪರಸ್ಪರ ಒಪ್ಪಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸರ್ಕಾರದ ಪರವಾಗಿ ಸ್ಪೀಕರ್ ಅಯಾಜ್ ಸಿದ್ದಿಕಿ, ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಐಶಾಕ್ ದರ್, ಪ್ರಧಾನಮಂತ್ರಿಗಳ ರಾಜಕೀಯ ಸಹಾಯಕ ರಾಣಾ ಸನಾವುಲ್ಲಾ, ಸೆನೆಟರ್ ಇರ್ಫಾನ್ ಸಿದ್ದಿಕಿ, ಮಾಜಿ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್, ಮಾಜಿ ಸಚಿವ ನವೀದ್ ಅಮರ್ ಮತ್ತಿತರರು ಭಾಗಿಯಾಗಿದ್ದರು.

ಪಿಟಿಐ ಪರವಾಗಿ ಮಾಜಿ ಸ್ಪೀಕರ್ ಅಸಾದ್ ಕಾಸಿರ್, ಸಹೀಬಜಾದ್ ಹಮೀದ್ ರಾಜಾ ಮತ್ತು ಸೆನೆಟರ್ ರಾಜ ನಾಸಿರ್ ಅಬ್ಬಾಸ್ ಪಾಲ್ಗೊಂಡಿದ್ದರು.

ಮುಂದಿನ ಮಾತುಕತೆಯು ಜನವರಿ 2ರಂದು ನಡೆಯಲಿದೆ. ಆ ದಿನ ಪಿಟಿಐ ತಂಡ ತನ್ನ ಬೇಡಿಕೆಗಳ ಪಟ್ಟಿಯನ್ನು ಸಭೆಯ ಮುಂದಿಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.