ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಾಲ್ವರು ಶಂಕಿತ ಐಎಸ್‌ಐಎಸ್ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಪಂಜಾಬ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ಇಲಾಖೆಯ (ಸಿಟಿಡಿ) ವಕ್ತಾರರೊಬ್ಬರು, ‘ಪಂಜಾಬ್, ಲಾಹೋರ್, ಟೋಬಾ ಟೇಕ್ ಸಿಂಗ್, ಬಹಾವಲ್‌ಪುರ ಮತ್ತು ಮಿಯಾಂವಾಲಿಯಲ್ಲಿನ ಉಗ್ರರ ಅಡಗುದಾಣಗಳ ಮೇಲೆ ಸಿಟಿಡಿ ದಾಳಿ ನಡೆಸಿತ್ತು’ ಎಂದು ಮಾಹಿತಿ ನೀಡಿದರು.
ಉಗ್ರರನ್ನು ಅಮ್ಜದುರ್ ರೆಹಮಾನ್, ಶೇರ್ ಆಲಿ, ಜಹಾಬುಲ್ಲಾ ಮತ್ತು ತಯ್ಯಬ್ ರಯೀಸ್ ಎಂದು ಗುರುತಿಸಲಾಗಿದೆ. ಇವರ ಬಳಿ ಇದ್ದ 2,570 ಗ್ರಾಂ ಸ್ಫೋಟಕ, ಮೂರು ಡೆಟೋನೇಟರ್, ರೈಫಲ್, ಪಿಸ್ತೂಲ್, 20 ಬುಲೆಟ್, ಗ್ರನೇಡ್ ಮತ್ತು ನಿಷೇಧಿತ ಐಎಸ್‌ಐಎಸ್‌ನ ಬರಹಗಳನ್ನು ವಶಕ್ಕೆ ಪಡೆಯಾಗಿದೆ ಎಂದು ತಿಳಿಸಿದರು.