ಇಸ್ಲಾಮಾಬಾದ್: ಭಾರತದ ಸೇನಾ ದಾಳಿಯಿಂದ ಭಾರೀ ನಷ್ಟವುಂಟಾಗಿದ್ದು, ಹೆಚ್ಚಿನ ಸಾಲ ನೀಡುವಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಪಾಕಿಸ್ತಾನದ ಆರ್ಥಿಕ ಸಚಿವಾಲಯವು ಶುಕ್ರವಾರ ‘ಎಕ್ಸ್’ ಮೂಲಕ ಮನವಿಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಖಾತೆ ‘ಹ್ಯಾಕ್‘ ಆಗಿದೆ ಎಂದು ಉತ್ತರ ನೀಡಿದೆ.

ಆರ್ಥಿಕ ವ್ಯವಹಾರಗಳ ಸಚಿವಾಲಯದ ಖಾತೆ ಹ್ಯಾಕ್ ಆಗಿದೆ ಎಂದು ಪಾಕ್ನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ನಕಲಿ ಟ್ವೀಟ್ ಅಲರ್ಟ್ ನೀಡಿದ್ದು, ಖಾತೆ ಸ್ಥಗಿತಗೊಳಿಸಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದೆ.

ತಮ್ಮ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿ, ಸಾಲದ ನೆರವಿಗಾಗಿ ಕೋರಿರುವ ನಕಲಿ ಪೋಸ್ಟ್ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತದ ಜೊತೆಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಅಂತರರಾಷ್ಟ್ರೀಯ ಸಮುದಾಯಗಳು ನೆರವಿಗೆ ಧಾವಿಸಬೇಕು. ಶತ್ರುಗಳ ದಾಳಿಯಿಂದ ಭಾರೀ ನಷ್ಟ ಉಂಟಾಗಿದ್ದು, ಅಂತರರಾಷ್ಟ್ರೀಯ ಸಂಸ್ಥೆಗಳು ಹೆಚ್ಚಿನ ಸಾಲ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರ ಮನವಿ ಮಾಡಿತ್ತು.

ಪಾಕಿಸ್ತಾನದ ಷೇರು ಮಾರುಕಟ್ಟೆಯು ಸೂಚ್ಯಂಕವು ಗುರುವಾರ 6 ಸಾವಿರ ಪಾಯಿಂಟ್ ಕುಸಿತ ಕಂಡಿತ್ತು. ಶುಕ್ರವಾರ ಬೆಳಿಗ್ಗೆ ಮತ್ತೆ 1 ಸಾವಿರ ಪಾಯಿಂಟ್ಗಳಷ್ಟು ಚೇತರಿಕೆ ಕಂಡಿತ್ತು. ಇದರ ಬೆನ್ನಲ್ಲೇ, ‘ಎಕ್ಸ್’ನಲ್ಲಿ ಈ ಪೋಸ್ಟ್ ಮಾಡಲಾಗಿತ್ತು.

ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಪಾಕಿಸ್ತಾನಕ್ಕೆ 7 ಬಿಲಿಯನ್ ಡಾಲರ್ ಸಾಲ ನೀಡಲು ಕಳೆದ ವರ್ಷ ಒಪ್ಪಿಗೆ ನೀಡಿತ್ತು. ಮುಂದಿನ ಕಂತು ಬಿಡುಗಡೆ ಸಂಬಂಧ ಕಾರ್ಯಕಾರಿ ಆಡಳಿತ ಮಂಡಳಿಯು ಸಭೆ ಸೇರುವ ಕೆಲ ದಿನಗಳ ಮುಂಚಿತವಾಗಿ ಈ ಪೋಸ್ಟ್ ಬಂದಿರುವುದು ಅಚ್ಚರಿ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.