ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

16 ವರ್ಷಗಳ ಬಳಿಕ ಇಸ್ಲಾಮಾಬಾದ್‌ನಲ್ಲಿ ಪೋಲಿಯೊ ಪ್ರಕರಣ ಪತ್ತೆ

ಪಾಕಿಸ್ತಾನದ ಪೋಲಿಯೊ ನಿರ್ಮೂಲನೆ ಪ್ರಯತ್ನಕ್ಕೆ ಹಿನ್ನಡೆ
Published : 6 ಸೆಪ್ಟೆಂಬರ್ 2024, 16:22 IST
Last Updated : 6 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ಇಸ್ಲಾಮಾಬಾದ್‌: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ 16 ವರ್ಷಗಳ ಬಳಿಕ ಮೊದಲ ಬಾರಿಗೆ ಪೋಲಿಯೊ ಪ್ರಕರಣ ಪತ್ತೆಯಾಗಿದೆ.

ಮಗುವಿನಲ್ಲಿ ಪೋಲಿಯೊ ವೈರಸ್‌ (ಡಬ್ಲ್ಯೂಪಿವಿ 1) ಪತ್ತೆಯಾಗಿರುವುದಾಗಿ ರಾಷ್ಟ್ರೀಯ ಆರೋಗ್ಯ ಕೇಂದ್ರದ ಸ್ಥಳೀಯ ಪ್ರಯೋಗಾಲಯ ದೃಢಪಡಿಸಿದೆ. ದೇಶವನ್ನು ಪೋಲಿಯೊ ಮುಕ್ತ ಮಾಡುವ ಪಾಕಿಸ್ತಾನದ ಪ್ರಯತ್ನಕ್ಕೆ ಈ ಮೂಲಕ ಹಿನ್ನಡೆಯಾಗಿದೆ.

ಪಾಕಿಸ್ತಾನದಲ್ಲಿ ಈ ವರ್ಷ ಪತ್ತೆಯಾದ 17ನೇ ಪೋಲಿಯೊ ಪ್ರಕರಣ ಇದಾಗಿದೆ.

‘ಪಾಕಿಸ್ತಾನದಲ್ಲಿ ಮತ್ತೊಂದು ಪೋಲಿಯೊ ಪ್ರಕರಣ ಪತ್ತೆಯಾಗಿರುವುದು ತುಂಬಾ ಆಘಾತಕಾರಿ ಸಂಗತಿಯಾಗಿದ್ದು. ಇದಕ್ಕೆ ಶಾಶ್ವತ ಪರಿಹಾರವಿಲ್ಲದಿದ್ದರೂ, ಲಸಿಕೆಗಳ ಮೂಲಕ ನಿಯಂತ್ರಿಸಬಹುದಾಗಿದೆ’ ಎಂದು ಪ್ರಧಾನ ಮಂತ್ರಿ ಕಚೇರಿಯಲ್ಲಿನ ಪೋಲಿಯೊ ನಿರ್ಮೂಲನಾ ವಿಭಾಗದ ಅಧಿಕಾರಿ ಆಯೇಷಾ ರಜಾ ಫಾರೂಕ್‌ ಅವರು ತಿಳಿಸಿದ್ದಾರೆ.

‘ಸೆ.9ರಿಂದ ಆರಂಭವಾಗಲಿರುವ ಪೋಲಿಯೊ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT