ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆಗೆ ಬಿತ್ತು ಗೋಲ್ಡನ್ ಫಿಶ್: ರಾತ್ರೋರಾತ್ರಿ ಸಿರಿವಂತನಾದ ಪಾಕ್ ಮೀನುಗಾರ

Published 10 ನವೆಂಬರ್ 2023, 15:22 IST
Last Updated 10 ನವೆಂಬರ್ 2023, 15:22 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಕರಾಚಿಯ ಮೀನುಗಾರನೊಬ್ಬ ತನಗೆ ಸಿಕ್ಕ ಅಪರೂಪದ ಮೀನನ್ನು ಹರಾಜಿನಲ್ಲಿ ಮಾರಿ ರಾತ್ರಿ ಕಳೆದು ಬೆಳಗಾಗುವದರೊಳಗೆ ಕೋಟ್ಯಧಿಪತಿಯಾಗಿದ್ದಾನೆ.

ಹಾಜಿ ಬಲೂಚ್ ಎನ್ನುವಾತ ಇಬ್ರಾಹಿಂ ಹೈದೇರಿ ಎನ್ನುವ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಆತನಲ್ಲಿ ಕೆಲಸ ಮಾಡುವವರಿಗೆ ಅರೇಬಿಯನ್‌ ಸಮುದ್ರದಲ್ಲಿ ಗೋಲ್ಡನ್‌ ಫಿಶ್‌ ಅಥವಾ ‘ಸೋವಾ’ ಎನ್ನುವ ಮೀನು ದೊರಕಿತ್ತು.

ಈ ‘ಸೋವಾ’ ಮೀನು ಸೇರಿ ಬಲೆಗೆ ಬಿದ್ದಿದ್ದ ಎಲ್ಲಾ ಮೀನುಗಳನ್ನು ಹಾಜಿ ಕರಾಚಿ ಬಂದರಿನಲ್ಲಿ ಹರಾಜಿಗೆ ಇರಿಸಿ ಬರೋಬ್ಬರಿ ₹7 ಕೋಟಿ (70 ಮಿಲಿಯನ್‌)ಗೆ ಮಾರಾಟ ಮಾಡಿದ್ದಾನೆ ಎಂದು ಪಾಕಿಸ್ತಾನ ಮೀನುಗಾರರ ವೇದಿಕೆ ಹೇಳಿದೆ.

ಸೋವಾ ಅಥವಾ ಗೋಲ್ಡನ್‌ ಫಿಶ್‌ ಬೆಲೆಕಟ್ಟಲಾಗದ ಮತ್ತು ಅತಿ ಅಪರೂಪದ ಮೀನಾಗಿದ್ದು, ಇದನ್ನು ಅನೇಕ ಔಷಧಗಳ ತಯಾರಿಕೆಯಲ್ಲಿ  ಬಳಕೆ ಮಾಡಲಾಗುತ್ತದೆ. ಅಲ್ಲದೆ ಈ ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಸಹ ಬಳಸಲಾಗುತ್ತದೆ.

‘ಒಂದು ಮೀನು ಹರಾಜಿನಲ್ಲಿ ಸುಮಾರು ₹70 ಲಕ್ಷಕ್ಕೆ (7 ಮಿಲಿಯನ್) ರೂಪಾಯಿಗಳನ್ನು ಪಡೆಯುತ್ತದೆ. ಈ ಮೀನು ಸಾಮಾನ್ಯವಾಗಿ 20 ರಿಂದ 40 ಕೆ.ಜಿ ತೂಗುವ ಮತ್ತು 1.5 ಮೀಟರ್‌ಗಳವರೆಗೆ ಬೆಳೆಯುತ್ತದೆ. ಪೂರ್ವ ಏಷ್ಯಾದ ದೇಶಗಳಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆಯಿದೆ.

ಈ ಮೀನು ಕರಾವಳಿಯ ಬಳಿ ಸಂತಾನೋತ್ಪತ್ತಿಯ ವೇಳೆಯಲ್ಲಿ ಮಾತ್ರ ಕಂಡುಬರುತ್ತದೆ ಎನ್ನುವ ಹಾಜಿ, ಹರಾಜಿನಲ್ಲಿ ಬಂದಿರುವ ಹಣವನ್ನು ತಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಜತೆಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT