ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯದಲ್ಲಿ ಮಧ್ಯ ಪ್ರವೇಶಕ್ಕೆ ಪಕ್ಷವು ಸೇನೆ ಆಹ್ವಾನಿಸಿಲ್ಲ: ಆರಿಫ್‌ ಅಲ್ವಿ

Published 29 ಮೇ 2024, 13:56 IST
Last Updated 29 ಮೇ 2024, 13:56 IST
ಅಕ್ಷರ ಗಾತ್ರ

ಕರಾಚಿ: ‘ರಾಜಕೀಯದಲ್ಲಿ ಮಧ್ಯ ಪ್ರವೇಶಿಸುವಂತೆ ನಮ್ಮ ಪಕ್ಷ ಎಂದಿಗೂ ಸೇನೆಯನ್ನು ಆಹ್ವಾನಿಸಿಲ್ಲ’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷದ ನಾಯಕ ಆರಿಫ್‌ ಅಲ್ವಿ ಹೇಳಿದ್ದಾರೆ.

‘ಅರ್ಥಪೂರ್ಣ ಮಾತುಕತೆ ನಡೆಸಲು ಸಾಧ್ಯವಿರುವ ಏಕೈಕ ಮಧ್ಯಸ್ಥಗಾರ ಸೇನೆ ಎನ್ನುವುದೇನೋ ನಿಜ’ ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ಕುರಿತು ನಿರ್ಧರಿಸುವ ಅಧಿಕಾರ ಅದಕ್ಕಿದೆ ಎಂದಿದ್ದಾರೆ. 

ಇಲ್ಲಿನ ಪ್ರೆಸ್‌ಕ್ಲಬ್‌ನ ಹೊರಗೆ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದನ್ನು ನಿರ್ಧರಿಸುವ ಅಧಿಕಾರ ಹೊಂದಿರುವವರ ಜತೆಗೆ ಮಾತನಾಡಲು ಇಮ್ರಾನ್‌ ಖಾನ್‌ ಬಯಸುತ್ತಾರೆ’ ಎಂದು ಹೇಳಿದ್ದಾರೆ.

‘ಆದರೆ, ನಮೂನೆ 47 ಮೂಲಕ ಅಧಿಕಾರಕ್ಕೆ ಬಂದವರ ಕೊಡುಗೆ ಏನು? ಅವರ ಜತೆ ಮಾತುಕತೆ ನಡೆಸಿದರೆ ಪ್ರಯೋಜನ ಇದೆಯೇ?’ ಎಂದೂ ಅವರು ಕೇಳಿದ್ದಾರೆ.

‘ಶೆಹಬಾಜ್‌ ಷರೀಫ್‌ ನೇತೃತ್ವದ ಪಕ್ಷವು ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್) ಮತ್ತು ಪಾಕಿಸ್ತಾನ ‍ಪೀಪಲ್ಸ್‌ ಪಾರ್ಟಿಗೆ (ಪಿಪಿಪಿ) ಅನುಕೂಲವಾಗುವಂತೆ ಫಲಿತಾಂಶವನ್ನು ನಮೂನೆ 47 ಮೂಲಕ ಬದಲಿಸಲಾಗಿದೆ’ ಎನ್ನುವುದು ಪಿಟಿಐ ಪಕ್ಷದ ಪ್ರತಿಪಾದನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT