ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ರೈಲಿಗೆ ಬೆಂಕಿ; 74 ಮಂದಿಯ ಪ್ರಾಣಕ್ಕೆ ಎರವಾಯ್ತು ಗ್ಯಾಸ್‌ ಸ್ಟೌ

ಗ್ಯಾಸ್‌_ಸಿಲಿಂಡರ್‌ ಸ್ಫೋಟ
Last Updated 1 ನವೆಂಬರ್ 2019, 1:44 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದಕರಾಚಿ–ರಾವಲ್ಪಿಂಡಿ ತೇಜ್‌ಗಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಆವರಿಸಿದ ಪರಿಣಾಮ ಕನಿಷ್ಠ 74 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹಲವು ಪ್ರಯಾಣಿಕರು ಚಲಿಸುವ ರೈಲಿನಿಂದ ಹೊರಗೆ ಜಿಗಿದಿದ್ದಾರೆ.

ಪಂಜಾಬ್‌ ಪ್ರಾಂತ್ಯದ ರಹಿಮ್‌ ಯಾರ್‌ ಖಾನ್‌ ಪಟ್ಟಣ ಸಮೀಪ ಈ ದುರಂತ ಸಂಭವಿಸಿದೆ. ತೇಜ್‌ಗಂ ರೈಲಿನ ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಬೆಳಗಿನ ತಿಂಡಿ ತಯಾರಿಸಲು ಬಳಸುತ್ತಿದ್ದ ಎರಡು ಪುಟ್ಟ ಗ್ಯಾಸ್‌ ಸ್ಟೌಗಳು(ಸಿಲಿಂಡರ್‌ ಒಳಗೊಂಡ) ಸ್ಫೋಟಗೊಂಡಿದ್ದು, ಬಹುಬೇಗ ಬೆಂಕಿ ರೈಲು ಬೋಗಿಗಳನ್ನು ಆವರಿಸಿದೆ.

ಅಡುಗೆ ಪದಾರ್ಥ ಹಾಗು ಅಡುಗೆಗೆ ಬಳಸಲು ಇಟ್ಟಿದ್ದ ಎಣ್ಣೆ ಬೆಂಕಿಮತ್ತಷ್ಟು ಹೆಚ್ಚಲುಕಾರಣವಾಗಿದೆ. ಕನಿಷ್ಠ 74 ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.

'ಪ್ರಾಣ ಉಳಿಸಿಕೊಳ್ಳಲು ಹಲವು ಪ್ರಯಾಣಿಕರು ಚಲಿಸುವ ರೈಲಿನಿಂದ ಜಿಗಿದಿದ್ದು, ಇದರಿಂದಲೂ ಅನೇಕರು ಮೃತಪಟ್ಟಿದ್ದಾರೆ' ಎಂದು ರೈಲ್ವೆ ಸಚಿವ ಶೇಖ್‌ ರಶೀದ್‌ ಅಹ್ಮದ್‌ ಟಿವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ದೂರದ ಪ್ರಯಾಣದ ವೇಳೆ ಪ್ರಯಾಣಿಕರು ಅಡುಗೆ ಸಿದ್ಧಪಡಿಸಿಕೊಳ್ಳವ ಸ್ಟೌಗಳೊಂದಿಗೆ ಬರುವುದು ಸಹಜ ಸಮಸ್ಯೆಯಾಗಿದೆ. ಹೂಡಿಕೆ ಕೊರತೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಪಾಕಿಸ್ತಾನದ ಹಳೆಯ ರೈಲ್ವೆ ಮಾರ್ಗಗಳು ದುರಸ್ತಿ ಕಾಣದೆ ಹಾಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT