ವಾಷಿಂಗ್ಟನ್: ತಾನು ಅಭಿವೃದ್ಧಿಪಡಿಸಿರುವ ಕೋವಿಡ್–19 ಲಸಿಕೆ ಪಡೆಯುವ 12 ವರ್ಷ ವಯೋಮಾನದ ಮಕ್ಕಳಲ್ಲಿಯೂ ರೋಗ ನಿರೋಧಕ ಶಕ್ತಿ ಬೆಳೆದು, ಸೋಂಕಿನಿಂದ ಪರಿಣಾಮಕಾರಿ ರಕ್ಷಣೆ ಸಿಗಲಿದೆ ಎಂದು ಫೈಜರ್ ಕಂಪನಿ ಬುಧವಾರ ಹೇಳಿದೆ.

ಶಾಲೆಗಳನ್ನು ಪುನಃ ಆರಂಭಿಸಲು ಸಿದ್ಧತೆ ನಡೆದಿರುವ ಈ ಸಮಯದಲ್ಲಿ, ಫೈಜರ್ ಕಂಪನಿಯ ಹೇಳಿಕೆಯಿಂದ 12 ವರ್ಷ ವಯೋಮಾನದವರಿಗೂ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗಲಿದೆ.

ಓದಿ:Covid-19 Karnataka Update: 4,225 ಹೊಸ ಪ್ರಕರಣ, 26 ಮಂದಿ ಸಾವು

ಫೈಜರ್ ಕಂಪನಿಯು 16 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆ ನೀಡಲು ಈಗಾಗಲೇ ಅನುಮೋದನೆ ನೀಡಿದೆ.

12ರಿಂದ 15 ವರ್ಷದ ವಯೋಮಾನದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಸಿಕೆಯ ನಿಗದಿತ ಡೋಸ್‌ಗಳನ್ನು ನೀಡಲಾಗಿದ್ದ ಈ ಗುಂಪಿನ ಅಭ್ಯರ್ಥಿಗಳಲ್ಲಿ ಕೋವಿಡ್–19 ಕಂಡು ಬಂದಿರಲಿಲ್ಲ ಎಂದು ಕಂಪನಿ ಹೇಳಿದೆ.

ಪ್ರಸ್ತುತ ವಿಶ್ವದ ವಿವಿಧೆಡೆ ಲಭ್ಯವಿರುವ ಲಸಿಕೆಗಳನ್ನು ವಯಸ್ಕರಿಗೆ ಮಾತ್ರ ನೀಡಲಾಗುತ್ತಿದೆ. ಅದರಲ್ಲೂ, ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೆ ಆದ್ಯತೆ ಮೇಲೆ ನೀಡಲಾಗುತ್ತಿದೆ.

ಓದಿ:ಕೋವಿಡ್ 2ನೇ ಅಲೆ: ತಿರುಮಲದಲ್ಲಿ ಭಕ್ತರಿಗೆ ಮತ್ತೆ ನಿರ್ಬಂಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.