ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತಾನ್‌: ಭಾರತ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಮೋದಿ

ಭಾರತದ ಸಹಭಾಗಿತ್ವದಿಂದ ಆಸ್ಪತ್ರೆ ನಿರ್ಮಾಣ: Gyaltsuen Jetsun Pema Mother and Child Hospital ಲೋಕಾರ್ಪಣೆ
Published 23 ಮಾರ್ಚ್ 2024, 5:18 IST
Last Updated 23 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ತಿಂಪು, ಭೂತಾನ್: ಭಾರತದ ಸಹಭಾಗಿತ್ವದಲ್ಲಿ ಭೂತಾನ್‌ನ ತಿಂಪುವಿನಲ್ಲಿ ನಿರ್ಮಿಸಲಾಗಿರುವ ತಾಯಿ ಮಕ್ಕಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (Gyaltsuen Jetsun Pema Mother and Child Hospital) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು.

ಈ ವೇಳೆ, ಭೂತಾನ್ ರಾಜ ಜಿಗ್ಮಿ ಕೇಸರ್, ಭೂತಾನ್ ಪ್ರಧಾನಿ ಶೆರಿಂಗ್‌ ಟೊಬ್ಗೆ ಉಪಸ್ಥಿತರಿದ್ದರು. ಆಸ್ಪತ್ರೆಯ ಒಳಗೆ ಪ್ರವೇಶಿಸಿದ ಮೋದಿ ಅವರು, ಅಲ್ಲಿನ ಸಿಬ್ಬಂದಿಯಿಂದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದರೊಂದಿಗೆ ಎರಡು ದಿನಗಳ ಭೂತಾನ್ ಪ್ರವಾಸವನ್ನು ಯಶಸ್ವಿಗೊಳಿಸಿದ ಪ್ರಧಾನಿಯವರು ಮರಳಿ ತಿಂಪುವಿನಿಂದ ಭಾರತಕ್ಕೆ ಹೊರಟರು.

ಈ ವೇಳೆ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ವಲಯದಲ್ಲಿ ಸಹಕಾರ ಸೇರಿ ಹಲವು ಒಪ್ಪಂದಗಳಿಗೆ ಭಾರತ ಮತ್ತು ಭೂತಾನ್‌ ಶುಕ್ರವಾರ ಸಹಿ ಹಾಕಿವೆ. ಉಭಯ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೂ ಒಡಂಬಡಿಕೆ (ಎಂಒಯು) ಅಂತಿಮಗೊಳಿಸಲಾಗಿದೆ.

ಶುಕ್ರವಾರ ಮೊದಲ ದಿನದ ಭೇಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಭೂತಾನ್‌ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್‌ ಆಫ್‌ ದಿ ಡ್ರುಕ್‌ ಗ್ಯಾಲ್ಪೊ’ ನೀಡಿ ಗೌರವಿಸಿದೆ.

ಶನಿವಾರ ಬೆಳಿಗ್ಗೆ ತಿಂಪುವಿನಿಂದ ಹೊರಟ ಪ್ರಧಾನಿಯವರಿಗೆ ಭೂತಾನ್ ಸರ್ಕಾರದ ವತಿಯಿಂದ ಸಾಂಪ್ರದಾಯಿಕ ಬಿಳ್ಕೊಡುಗೆ ನೀಡಲಾಯಿತು.

ಪ್ರಧಾನಿಯವರು ತಮ್ಮ ಭೇಟಿಯ ಸಂಗತಿಗಳನ್ನು ಎಕ್ಸ್‌ ತಾಣದಲ್ಲಿ ಭೂತಾನಿ ಭಾಷೆಯಲ್ಲಿಯೇ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT