‘ಪೋಲೆಂಡ್ ಆರೋಪಗಳು ಆಧಾರರಹಿತ’ ಎಂದು ರಷ್ಯಾ ರಾಯಭಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ‘ತಾನು ಹೊಡೆದುರುಳಿಸಿರುವ ಡ್ರೋನ್‌ಗಳು ರಷ್ಯಾಕ್ಕೆ ಸೇರಿದವು ಎನ್ನುವ ಬಗ್ಗೆ ಪೋಲೆಂಡ್ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂಬುದಾಗಿ ರಷ್ಯಾ ಅಧಿಕಾರಿಗಳು ಹೇಳಿದ್ದಾರೆ’ ಎಂದೂ ಮಾಧ್ಯಮಗಳು ವರದಿ ಮಾಡಿವೆ.