ಲಾಹೋರ್ (ಪಿಟಿಐ): ರ್ಯಾಲಿ, ಪ್ರತಿಭಟನೆಗಳ ಮೇಲೆ ಪಾಕಿಸ್ತಾನ ಸರ್ಕಾರ ಹೇರಿರುವ ನಿಷೇಧ ಧಿಕ್ಕರಿಸಿ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ನಿವಾಸದ ಬಳಿ ಸೇರಿದ್ದ ಅವರ ಬೆಂಬಲಿಗರನ್ನು ಚದುರಿಸಲು ಪೊಲೀಸರು ಬುಧವಾರ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಸಿಡಿಸಿದರು.

ಪ್ರಾಂತೀಯ ರಾಜಧಾನಿಯಲ್ಲಿ ಸಾರ್ವಜನಿಕ ಕೂಟಗಳನ್ನು ಸೆಕ್ಷನ್ 144ರ ಅಡಿಯಲ್ಲಿ ನಿಷೇಧಿಸಲಾಗಿದೆ ಎನ್ನುವ ವರದಿ ಹೊರಬಿದ್ದ ನಂತರ, ‘ಶಾಂತವಾಗಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಫ್ಯಾಸಿಸ್ಟ್ ಕ್ರಮ. ಇಮ್ರಾನ್ ಖಾನ್ ಅವರನ್ನು ಬಂಧಿಸಲು ಹಾದಿ ಸುಗಮ ಮಾಡಿಕೊಳ್ಳುತ್ತಿರುವ ಪ್ರಯತ್ನವಿದು’ ಎಂದು ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ( ಪಿಟಿಐ) ದೂರಿದೆ.

ಮಹಿಳೆಯರು ಸೇರಿ ಪಿಟಿಐ ಕಾರ್ಯಕರ್ತರ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಮತ್ತು ಲಾಠಿ ಪ್ರಹಾರ ನಡೆಸಿದರು. ಪ್ರತಿರೋಧ ತೋರಿದ ಕಾರ್ಯಕರ್ತರನ್ನು ಪೊಲೀಸ್ ವಾಹನಗಳಿಗೆ ಹತ್ತಿಸಿಕೊಂಡರು. ಅಲ್ಲದೆ, ಪೊಲೀಸರು ಪಿಟಿಐ ಕಾರ್ಯಕರ್ತರಿಗೆ ಸೇರಿದ ಕಾರುಗಳು, ಇತರ ವಾಹನಗಳನ್ನು ಜಖಂಗೊಳಿಸಿದರು ಎಂದು ಪಕ್ಷದ ಹಿರಿಯ ನಾಯಕ ಶಿರೀನ್ ಮಝಾರಿ ಹೇಳಿದ್ದಾರೆ.

ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ರಾಣಾ ಸನಾವುಲ್ಲಾ, ‘ಭಯೋತ್ಪಾದಕ ದಾಳಿ ನಡೆಯುವ ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ, ಪಂಜಾಬ್ ಪ್ರಾಂತ್ಯದಲ್ಲಿ ಸಾರ್ವಜನಿಕ ಸಮಾರಂಭಗಳು ಮತ್ತು ರ್ಯಾಲಿಗಳನ್ನು ನಿಷೇಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.