ಢಾಕಾ: ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ (79) ಮಂಗಳವಾರ ನಿಧನರಾದರು. ಮೂರು ಸಲ ಪ್ರಧಾನಿಯಾಗಿದ್ದ ಖಾಲಿದಾ ಅವರು ಸುದೀರ್ಘ ಅವಧಿಗೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್ಪಿ) ಅಧ್ಯಕ್ಷರಾಗಿದ್ದರು.

ಅವರ ನಾಲ್ಕು ದಶಕಗಳ ರಾಜಕೀಯ ಪ್ರಯಾಣವು ಹಲವು ಏರಿಳಿತಗಳಿಂದ ಕೂಡಿದೆ. ದೇಶದ ಪ್ರಮುಖ ಪಕ್ಷವನ್ನು ಮುನ್ನಡೆಸಿ ಪ್ರಧಾನಿ ಹುದ್ದೆಗೆ ಏರಿದ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದರು.

ಖಾಲಿದಾ ಸಾಗಿದ ಹಾದಿ...

1946ರ ಆಗಸ್ಟ್ 15ರಂದು ಅವಿಭಜಿತ ಭಾರತದ ದಿನಾಜ್ಪುರ (ಪಶ್ಚಿಮ ಬಂಗಾಳದಲ್ಲಿದೆ) ಜಿಲ್ಲೆಯಲ್ಲಿ ತಯ್ಯಬಾ– ಇಸ್ಕಂದರ್ ಮಜುಮ್ದಾರ್ ದಂಪತಿಗೆ ಜನನ

1981ರ ಮೇ 30ರಂದು ಪತಿ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಹತ್ಯೆಯ ಬಳಿಕ ಸಕ್ರಿಯ ರಾಜಕಾರಣ ಪ್ರವೇಶ

1982ರ ಜನವರಿ 3ರಂದು ಬಿಎನ್ಪಿ ಪಕ್ಷದ ಸದಸ್ಯರಾದರು. ಈ ಪಕ್ಷವನ್ನು ಜಿಯಾವುರ್ ರೆಹಮಾನ್ ಅವರು 1978ರಲ್ಲಿ ಸ್ಥಾಪಿಸಿದ್ದರು

1983ರ ಮಾರ್ಚ್ನಲ್ಲಿ ಪಕ್ಷದ ಉಪಾಧ್ಯಕ್ಷರಾದ ಅವರು 1984ರ ಮೇನಲ್ಲಿ ಅಧ್ಯಕ್ಷರಾದರು

1982ರಲ್ಲಿ ಅಂದಿನ ಸೇನಾ ಮುಖ್ಯಸ್ಥ ಜನರಲ್ ಎಚ್.ಎಂ.ಇರ್ಷಾದ್ ನೇತೃತ್ವದಲ್ಲಿ ನಡೆದ ಸೇನಾ ದಂಗೆಯ ಬಳಿಕ ಪ್ರಜಾಪ್ರಭುತ್ವ ಮರು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದರು

1990ರ ಡಿಸೆಂಬರ್ನಲ್ಲಿ ಇರ್ಷಾದ್ ನೇತೃತ್ವದ ಸೇನಾಡಳಿತ ಕೊನೆಗೊಂಡ ಬಳಿಕ 1991ರ ಫೆಬ್ರುವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು

ಚುನಾವಣೆಯಲ್ಲಿ ಗೆದ್ದ ಬಿಎನ್ಪಿ ಪಕ್ಷದ ಖಾಲಿದಾ ಅವರು 1991ರಲ್ಲಿ ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು

1996ರ ಚುನಾವಣೆಯಲ್ಲೂ ಬಿಎನ್ಪಿ ಗೆಲುವು ಸಾಧಿಸಿ ಖಾಲಿದಾ ಎರಡನೇ ಬಾರಿ ಪ್ರಧಾನಿ ಹುದ್ದೆಗೇರಿದರು. ಆದರೆ ಅವರ ಸರ್ಕಾರ 12 ದಿನ ಮಾತ್ರ ಅಧಿಕಾರದಲ್ಲಿತ್ತು. ಜಿಯಾ ಅವರ ಸರ್ಕಾರ ಹಂಗಾಮಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿತು

1999ರಲ್ಲಿ ಇತರ ಪಕ್ಷಗಳ ಜತೆ ಸೇರಿಕೊಂಡು ಮೈತ್ರಿಕೂಟ ರಚಿಸಿದರು. 2001ರ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿ 2006ರವರೆಗೆ ಅಧಿಕಾರ ನಡೆಸಿದರು

2007ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾದರು. ಸೇನಾಡಳಿತದ ಅವಧಿಯಲ್ಲಿ ಹಲವು ಬಾರಿ ಗೃಹಬಂಧನಕ್ಕೂ ಒಳಗಾದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.