ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮ್‌| ಪೋಪ್‌ ಫ್ರಾನ್ಸಿಸ್‌ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

Published 16 ಜೂನ್ 2023, 16:29 IST
Last Updated 16 ಜೂನ್ 2023, 16:29 IST
ಅಕ್ಷರ ಗಾತ್ರ

ರೋಮ್‌: ಇಲ್ಲಿನ ಗೆಮೆಲ್ಲಿ ಆಸ್ಪತ್ರೆಯಲ್ಲಿ ಒಂಬತ್ತು ದಿನಗಳ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಪೋಪ್‌ ಫ್ರಾನ್ಸಿನ್‌ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. 

ಪೋಪ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಡಾ. ಸೆರಗಿಯೊ ಅಲ್ಫೈರಿ ಅವರು, ‘ಪೋಪ್‌ ಅವರ ಆರೋಗ್ಯ ಸುಧಾರಿಸಿದೆ. ಈಗ ಅವರ ಆರೋಗ್ಯ ಮೊದಲಿಗಿಂತಲೂ ಉತ್ತಮವಾಗಿದೆ’ ಎಂದು ಹೇಳಿದ್ದಾರೆ.

ಗೆಮೆಲ್ಲಿ ಪಾಲಿಕ್ಲೀನಿಕ್‌ನ ಮುಖ್ಯ ನಿರ್ಗಮನ ದ್ವಾರದಿಂದ ವ್ಹೀಲ್‌ಚೇರ್‌ನಲ್ಲಿ ಹೊರ ಬಂದ 86 ವರ್ಷದ ಫ್ರಾನ್ಸಿಸ್‌ ಅವರು ತಮ್ಮನ್ನು ಕಾಣಲು ಆಸ್ಪತ್ರೆ ಬಳಿ ಸೇರಿದ್ದ ಅನುಯಾಯಿಗಳು ಮತ್ತು ಹಿತೈಷಿಗಳತ್ತ ನಗು ಬೀರಿ, ಧನ್ಯವಾದ ಸಲ್ಲಿಸಿದರು. ಬಳಿಕ ಕಾರಿನಲ್ಲಿ ವ್ಯಾಟಿಕನ್‌ತ್ತ ಹೊರಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT