ಕರಾಚಿ: ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಕ್ಷದ ಶಾಸಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕುಟುಂಬದವರೊಂದಿಗಿನ ಭೂ ವಿವಾದ ಸಂಬಂಧ ಆಕೆಯನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೌಶೆರೊ ಫಿರೋಸ್ ಜಿಲ್ಲೆಯ ಸಿಂದ್ ಪ್ರಾಂತ್ಯದಲ್ಲಿ ಶನಿವಾರ ಶಾಸಕಿ ಶಹನಾಜ್ ಅನ್ಸಾರಿಯ ಹತ್ಯೆ ಮಾಡಲಾಗಿದೆ ಎಂದು ಆಕೆಯ ಸೋದರಳಿಯ ಆರೋಪಿಸಿದ್ದಾರೆ.

ಕೋಕರ್ ಎಂಬುವವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲು ಶಾಸಕಿ ತೆರಳುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.

ಕೋಕರ್ ಅವರ ಸೋದರಳಿಯ ಹಾಗೂ ಶಹನಾಜ್ ಅವರ ಮಧ್ಯೆ ಸಂಘರ್ಷ ಇದ್ದರೂ, ಶಾಸಕಿ ಶ್ರದ್ಧಾಂಜಲಿ ಸಭೆಗೆ ಹಾಜರಾಗಲು ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂದ್ ಪ್ರಾಂತ್ಯದ ರಾಜಕೀಯದಲ್ಲಿ ಶಹನಾಜ್ ಅವರು ಸಕ್ರಿಯರಾಗಿದ್ದರು. ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕೂಡ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.