ಮಾಸ್ಕೊ: ‘ಉಕ್ರೇನ್ ಸಮಸ್ಯೆಗೆ ಕೊನೆಹಾಡಿದ್ದೇವೆ. ಮುಂದಿನ ಸರದಿ ಪೋಲೆಂಡ್‌ನದು’ ಎಂದು ಚೆಚನ್ಯಾ ನಾಯಕ ಮತ್ತು ಪುಟಿನ್ ಅವರ ಮಿತ್ರ ರಮ್ಜಾನ್ ಕದಿರೋವ್ ಹೇಳಿದ್ದಾರೆ. ಈ ಮೂಲಕ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಿ ಬೆಂಬಲಕ್ಕೆ ನಿಂತ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಪೋಲೆಂಡ್‌ಗೆ ನೇರ ಬೆದರಿಕೆ ಹಾಕಿದ್ದಾರೆ.

ಕದಿರೋವ್ ಬೆದರಿಕೆ ಹಾಕಿರುವ ವಿಡಿಯೊ ಟ್ವಿಟರ್‌ನಲ್ಲಿ ಗುರುವಾರ ಬಿಡುಗಡೆಯಾಗಿದ್ದು, ‘ನಮಗೆ ಪುಟಿನ್ ಅವರು ಆದೇಶ ನೀಡಿದರೆ, ಕೇವಲ ಆರು ಸೆಕೆಂಡ್‌ಗಳಲ್ಲಿ ನಮ್ಮ ಸಾಮರ್ಥ್ಯವನ್ನು ನಿಮಗೆ ತೋರಿಸುತ್ತೇವೆ’ ಎಂದು ಬೆದರಿಕೆ ಹಾಕಿರುವಸಂದೇಶ ವಿಡಿಯೊದಲ್ಲಿದೆ.

ಉಕ್ರೇನ್ ಮೇಲೆ ಪುಟಿನ್ ಸಾರಿರುವ ಸೇನಾ ಕಾರ್ಯಾಚರಣೆ ಸ್ವಾಗತಿಸಿರುವ ಕದಿರೋವ್, ರಷ್ಯಾ ಪರ ಹೋರಾಟಕ್ಕೆ ಚೆಚನ್ಯಾಪಡೆಯ ಒಂದು ಸಾವಿರ ಯೋಧರು ಮಾರ್ಚ್ ಎರಡನೇ ವಾರದೊಳಗೆ ಉಕ್ರೇನ್ ತಲುಪಿದ್ದರು ಎಂದು ಹೇಳಿಕೊಂಡಿದ್ದಾರೆ.

ಉಕ್ರೇನ್‌ಗೆ ನೀಡಿರುವ ಶಸ್ತ್ರಾಸ್ತ್ರಗಳನ್ನು ಪೋಲೆಂಡ್ ವಾಪಸ್ ಪಡೆಯಬೇಕು ಎಂದು ಕದಿರೋವ್‌ಎಚ್ಚರಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಎರಡನೇ ವಿಶ್ವಸಮರದ ವಿಜಯ ದಿನೋತ್ಸವದಂದು ಪೋಲೆಂಡ್‌ನಲ್ಲಿ ರಷ್ಯಾ ರಾಯಭಾರಿ ಸೆರ್ಗೆ ಆಂಡ್ರೀವ್ ಮೇಲೆ ಕೆಂಪು ಬಣ್ಣ ಎರಚಿ, ಅವರ ನಿಯೋಗವನ್ನು ತಕ್ಷಣ ದೇಶ ತೊರೆಯಲು ಒತ್ತಾಯಿಸಿದ ಘಟನೆ ಪ್ರಸ್ತಾಪಿಸಿರುವ ಕದಿರೋವ್ ‘ನಮ್ಮ ರಾಯಭಾರಿಯನ್ನು ನೀವು ನಡೆಸಿಕೊಂಡ ರೀತಿಗೆ ಅಧಿಕೃತವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.