ಕೀವ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ.

ರಷ್ಯಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಧವಾರ ಬೆಳಿಗ್ಗೆ ಈ ಕಡತಗಳನ್ನು ಪ್ರಕಟಿಸಲಾಗಿದೆ.

ಡೊನೆಸ್ಕ್,ಲುಹಾನ್‌ಸ್ಕ್, ಝಪೋರಿಝಿಯಾ ಮತ್ತು ಕೆರ್ನಾನ್ ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ರಷ್ಯಾ ಸಂಸತ್ತಿನ ಎರಡೂ ಸದನಗಳು ಇತ್ತೀಚೆಗೆ ಅನುಮೋದನೆ ನೀಡಿದ್ದವು. ಇದಕ್ಕೂ ಮುನ್ನ, ಈ ನಾಲ್ಕು ಪ್ರದೇಶಗಳಲ್ಲಿ ಈ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.

ರಷ್ಯಾದ ನಡೆಯನ್ನು ತಳ್ಳಿಹಾಕಿರುವ ಉಕ್ರೇನ್ ಅಧ್ಯಕ್ಷರ ಕಾರ್ಯಾಲಯ,ಪುಟಿನ್ ಸಹಿ ಮಾಡಿರುವ ಕಡತಗಳಿಗೆ ಬೆಲೆಯೇ ಇಲ್ಲ ಎಂದು ಹೇಳಿದೆ.

‘ದಕ್ಷಿಣ ಕೆರ್ನಾನ್ ಪ್ರದೇಶದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಏಳು ಗ್ರಾಮಗಳನ್ನು ನಾವು ಮರಳಿ ವಶಕ್ಕೆ ಪಡೆದಿದ್ದೇವೆ. ಅಲ್ಲಿ ಉಕ್ರೇನ್‌ನ ಧ್ವಜಗಳನ್ನು ಹಾರಿಸಲಾಗಿದೆ’ ಎಂದು ಕೀವ್‌ನ ಸೇನಾ ಪಡೆ ಬುಧವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.