ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದಲ್ಲಿ VHPಯಿಂದ 13ಸಾವಿರ ಕಿ.ಮೀ ರಥಯಾತ್ರೆ!

ಸಿಂಗರಿಸಿದ ಟೊಯೊಟಾ ವಾಹನದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯೊಂದಿಗೆ ಯಾತ್ರೆ ಸಂಚರಿಸಲಿದೆ
Published 22 ಮಾರ್ಚ್ 2024, 5:56 IST
Last Updated 22 ಮಾರ್ಚ್ 2024, 5:56 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಮೆರಿಕ, ಕೆನಡಾದ ವಿಶ್ವ ಹಿಂದೂ ಪರಿಷತ್ ಘಟಕಗಳು, ’ರಾಮ ಮಂದಿರ ರಥಯಾತ್ರಾ’ವನ್ನು ಆರಂಭಿಸುತ್ತಿವೆ. ಮಾರ್ಚ್ 25ಕ್ಕೆ ಚಿಕಾಗೊದಿಂದ ಯಾತ್ರೆ ಹೊರಡಲಿದೆ.

60 ದಿನಗಳಲ್ಲಿ ರಥಯಾತ್ರೆ ಅಮೆರಿಕ 48 ರಾಜ್ಯಗಳಲ್ಲಿ ಸಂಚರಿಸಿ 8150 ಮೈಲಿ (ಸುಮಾರು 13 ಸಾವಿರ ಕಿ.ಮೀ) ಕ್ರಮಿಸಲಿದೆ. ಈ ವೇಳೆ ಯಾತ್ರೆ ಅಮೆರಿಕದ 851 ಹಿಂದೂ ದೇವಾಲಯಗಳನ್ನು ಸಂದರ್ಶಿಸಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಯಾತ್ರೆಯ ಸಂಘಟಕರಾದ ಅಮಿತಾಬ್ ಮಿತ್ತಲ್ ತಿಳಿಸಿದ್ದಾರೆ.

ಕೆನಡಾದ 150 ಹಿಂದೂ ದೇವಾಲಯಗಳನ್ನು ಈ ಯಾತ್ರೆ ಸಂದರ್ಶಿಸಲಿದೆ ಎಂದು ಅವರು ತಿಳಿಸಿದ್ದಾರೆ. ಕೆನಡಾದಲ್ಲಿನ ಯಾತ್ರೆ ಪ್ರತ್ಯೇಕವಾಗಿದ್ದು ಇದನ್ನು ಅಲ್ಲಿನ ನಮ್ಮ ಘಟಕ ನೋಡಿಕೊಳ್ಳುತ್ತದೆ ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಿಂಗರಿಸಿದ ಟೊಯೊಟಾ ವಾಹನದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯೊಂದಿಗೆ ಯಾತ್ರೆ ಸಂಚರಿಸಲಿದೆ. ಈ ವೇಳೆ ಅಯೋಧ್ಯೆಯಿಂದ ಬಂದಿರುವ ಅಕ್ಷತೆ, ಪ್ರಸಾದ ಹಾಗೂ ತೀರ್ಥವನ್ನು ಅಮೆರಿಕದ ಹಿಂದೂ ದೇವಾಲಯಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಯಾತ್ರೆ ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಯಾತ್ರೆ ಅಮೆರಿಕದ ಹಿಂದೂಗಳಿಂದ ನಡೆಯುತ್ತಿದೆ ಎಂದು ಅಮೆರಿಕದ ಹಿಂದೂ ಮಂದಿರ ಅಭಿವೃದ್ಧಿ ಸಮಿತಿ (HMEC) ಸಂಯೋಜಕಿ ತೇಜಲ್ ಶಾ ತಿಳಿಸಿದ್ದಾರೆ.

ಯಾತ್ರೆಯಲ್ಲಿ ಭಾಗವಹಿಸುವುದಾಗಿ ಸಾವಿರಾರು ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ತಿಂಗಳು ಮೇ 23ರಂದು ಯಾತ್ರೆ ಇಲಿನೊಯಿಸ್‌ ರಾಜ್ಯದಲ್ಲಿ ಸಮಾರೋಪಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT