ಲಂಡನ್: ಮುಕ್ತ ವ್ಯಾಪಾರ ಒಪ‍್ಪಂದದ (ಎಫ್‌ಟಿಎ) ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ರಚನಾತ್ಮಕ ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ರಿಷಿ ಸುನಕ್ ಅವರು ಸೋಮವಾರ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಸಂಘರ್ಷ, ಹವಾಮಾನ ಕ್ರಮ ಮತ್ತು ಭಾರತದೊಂದಿಗಿನ ಸಂಬಂಧ ಬಲಪಡಿಸುವುದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸುವುದು ಸೇರಿದಂತೆ ತಮ್ಮ ಭಾರತ ಭೇಟಿಯ ಮೂರು ಪ್ರಮುಖ ಉದ್ದೇಶಗಳ ಬಗ್ಗೆ ಸುನಕ್ ತಿಳಿಸಿದರು.
‘ರಕ್ಷಣೆ, ತಂತ್ರಜ್ಞಾನ ಮತ್ತು ನಮ್ಮ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಬಲಪಡಿಸುವ ಬಗ್ಗೆ ಮೋದಿ ಅವರೊಂದಿಗೆ ಉತ್ತಮ ಚರ್ಚೆ ನಡೆದಿದೆ ಎಂದರು.