ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೊಟ್‌ನಿಂದ ರೋಬೊಟ್ ಸೃಷ್ಟಿ!

Last Updated 27 ಅಕ್ಟೋಬರ್ 2018, 15:24 IST
ಅಕ್ಷರ ಗಾತ್ರ

ಜ್ಯೂರಿಚ್: ಇಲ್ಲಿ ರೋಬೊಟ್‌ಗಳು ತಯಾರಾಗುತ್ತವೆ.. ಅವುಗಳನ್ನು ತಯಾರಿಸುವವರು ಬೇರಾರೂ ಅಲ್ಲ ರೋಬೊಟ್‌ಗಳೇ! ಹೌದು, ಸ್ವಿಟ್ಜರ್ಲೆಂಡ್‌ನ ಎಂಜಿನಿಯರಿಂಗ್ ಕಂಪನಿ ‘ಎಬಿಬಿ’ ಚೀನಾದ ಶಾಂಘೈನಲ್ಲಿ ಬೃಹತ್ ಕಾರ್ಖಾನೆಗೆ ಅಂದಾಜು ₹1,100 ಕೋಟಿ (150 ಮಿಲಿಯನ್ ಯುಎಸ್‌ಡಿ) ಬಂಡವಾಳ ಹೂಡಿದೆ.

ಕೈಗಾರಿಕಾ ರೋಬೊಟ್ ಉತ್ಪಾದನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಎಬಿಬಿ, ಏಷ್ಯಾ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ. ಅಮೆರಿಕ ಹೊರತುಪಡಿಸಿದರೆ, ಚೀನಾ ದೇಶವೇ ರೋಬೊಟ್‌ಗಳ ಅತಿದೊಡ್ಡ ಮಾರುಕಟ್ಟೆ. ಏಷ್ಯಾ ರಾಷ್ಟ್ರಗಳಿಗೆ ಇಲ್ಲಿಂದಲೇ ರಫ್ತು ಮಾಡುವ ಉದ್ದೇಶದಿಂದ ಚೀನಾದಲ್ಲಿ ಉದ್ದಿಮೆ ಸ್ಥಾಪಿಸಿದ್ದು, 2020ರ ವೇಳೆಗೆ ಇದು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ರೋಬೊ ಉದ್ಯೋಗಿ!

–ನೌಕರರ ವೇತನ ಹೆಚ್ಚುತ್ತಿರುವ ಕಾರಣ, ರೋಬೊಟ್‌ ಬಳಕೆಗೆ ಚೀನಾ ಒತ್ತು

–ಯಾಂತ್ರೀಕರಣದ ಮೂಲಕ ಇತರ ದೇಶಗಳಿಗೆ ಸ್ಪರ್ಧೆ ಒಡ್ಡುವ ಉದ್ದೇಶ

–2017ರಲ್ಲಿ 1,38,000 ರೋಬೊಟ್ ಮಾರಾಟವಾಗಿದ್ದವು

–ಪ್ರತಿ 3 ರೋಬೊಟ್‌ಗಳ ಪೈಕಿ ಒಂದು ಚೀನಾದಲ್ಲಿ ಮಾರಾಟ

–75 ಸಾವಿರ ಚದರಡಿ ಜಾಗದಲ್ಲಿ ಕಾರ್ಖಾನೆ ಕಾರ್ಯಾರಂಭ

–ಎಬಿಬಿಯಲ್ಲಿ ರೋಬೊಟ್‌ಗಳೇ ಉದ್ಯೋಗಿಗಳು; ಹೊಸ ನೌಕರರ ನೇಮಕ ಇಲ್ಲ

–ನೌಕರರ ಜತೆ ಸಮನಾಗಿ ಕೆಲಸ ಮಾಡಬಲ್ಲ YuMi ರೊಬೊಟ್ ನಿಯೋಜನೆ

–ಅತ್ಯಂತ ಕ್ಲಿಷ್ಟ ಜೋಡಣೆ ಕೆಲಸವನ್ನು ಕರಾರುವಕ್ಕಾಗಿ ಮಾಡುವ ಸಾಮರ್ಥ್ಯದ ರೋಬೊ

–ಎಬಿಬಿ ಪ್ರತಿಸ್ಪರ್ಧಿ ಕಂಪನಿ ‘ಕುಕಾ’ ಸಹ ಹಾಂಕಾಂಗ್ ಸಮೀಪದ ಶುಂಡೆ ಎಂಬಲ್ಲಿ ತನ್ನ ಉದ್ದಿಮೆ ವಿಸ್ತರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT