ಟೆಲ್ ಅವೀವ್: ಇಸ್ರೇಲ್ನ ಟೆಲ್ ಅವೀವ್ ನಗರದ ಮೇಲೆ ಯೆಮನ್ ಕಡೆಯಿಂದ ರಾಕೆಟ್ ದಾಳಿ ನಡೆದಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಶನಿವಾರ ಮುಂಜಾನೆ 4ರ ಸುಮಾರಿಗೆ ಟೆಲ್ ಅವೀವ್ಗೆ ರಾಕೆಟ್ ಅಪ್ಪಳಿಸುವ ಮುನ್ನ ಎಚ್ಚರಿಕೆಯ ಸೈರನ್ ಮೊಳಗಿದೆ. ಈ ವೇಳೆ ಅನೇಕರು ಬಾಂಬ್ ನಿರೋಧಕ ಅಡಗು ತಾಣಗಳನ್ನು ಸೇರಿಕೊಂಡರು. ರಾಕೆಟ್ ಅಪ್ಪಳಿಸಿದಾಗ ಕಿಟಕಿಯ ಗಾಜುಗಳು ಒಡೆದ ಕಾರಣ 16 ಜನರಿಗೆ ಗಾಯಗಳಾಗಿವೆ. ಅಡಗು ತಾಣದತ್ತ ಧಾವಿಸುವಾಗ ಬಿದ್ದು ಇತರ 14 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದೆ.

‘ಇಸ್ರೇಲ್– ಹಮಾಸ್ ಯುದ್ಧ ಆರಂಭವಾದ ಬಳಿಕ ಇರಾನ್ ಬೆಂಬಲಿತ ಹೂಥಿ ಬಂಡುಕೋರರು 200ಕ್ಕೂ ಹೆಚ್ಚು ಕ್ಷಿಪಣಿ ಹಾಗೂ ಡ್ರೋನ್ಗಳಿಂದ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಗಾಜಾದಲ್ಲಿ ಕದನ ವಿರಾಮ ಘೋಷಿಸುವವರೆಗೂ ದಾಳಿ ನಿಲ್ಲುವುದಿಲ್ಲ ಎಂದು ಹೂಥಿ ಬಂಡುಕೋರರು ಹೇಳಿದ್ದಾರೆ’ ಎಂದು ಇಸ್ರೇಲ್ ತಿಳಿಸಿದೆ.

ಇಸ್ರೇಲ್ ಸೇನೆ ಗುರುವಾರ ನಡೆಸಿದ ದಾಳಿಯಿಂದಾಗಿ ಕೆಂಪು ಸಮುದ್ರದಲ್ಲಿ ಹೂಥಿ ನಿಯಂತ್ರಣದಲ್ಲಿರುವ ಕೆಲವು ಬಂದರುಗಳಿಗೆ ತೀವ್ರ ಹಾನಿಯಾಗಿದೆ. ಈ ದಾಳಿಯು ಬಂದರಿನ ಸಾಮರ್ಥ್ಯವನ್ನು ಗಣನೀಯವಾಗಿ ತಗ್ಗಿಸಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.