ವಾಷಿಂಗ್ಟನ್: ಚೀನಾದೊಂದಿಗೆ ವ್ಯವಹಾರದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಅಂತಿಮಗೊಳಿಸಿದ ಪನಾಮಾ ನಿರ್ಧಾರವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸ್ವಾಗತಿಸಿದ್ದಾರೆ.

’ಪನಾಮಾದ ಈ ನಿರ್ಧಾರವು ಅಮೆರಿಕದೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಿದೆ. ಜತೆಗೆ ಮುಕ್ತ ಪನಾಮಾ ಕಾಲುವೆಗೆ ಪೂರಕವಾಗಿದೆ’ ಎಂದಿದ್ದಾರೆ.

1999ರಲ್ಲಿ ಪನಾಮಾಗೆ ಅತ್ಯಂತ ಪ್ರಮುಖ ಜಲಮಾರ್ಗದ ಕಾಲುವೆಯನ್ನು ಅಮೆರಿಕ ಹಸ್ತಾಂತರಿಸಿತ್ತು. ಆದರೆ ಇದರಲ್ಲಿ ಅನ್ಯ ರಾಷ್ಟ್ರಗಳ ಹಸ್ತಕ್ಷೇಪ ಇರಬಾರದು ಎಂಬ ಷರತ್ತನ್ನು ಪನಾಮಾ ಉಲ್ಲಂಘಿಸಿದೆ. ಕಾಲುವೆಯನ್ನು ಚೀನಾ ನಿರ್ವಹಿಸುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು. ಪನಾಮಾ ಕಾಲುವೆಯನ್ನು ಮರಳಿ ಪಡೆಯುವ ಬೆದರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪೂರ್ವ ಹಾಗೂ ನಂತರವೂ ಪುನರುಚ್ಚರಿಸಿದ್ದರು.

ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಪನಾಮಾ ಅಧ್ಯಕ್ಷ ಜೋಸ್ ರಾಲ್ ಮುಲಿನೊ ಅವರು, ‘ಕಾಲುವೆಯು ಪನಾಮಾದ್ದಾಗಿತ್ತು, ಪನಾಮಾದ್ದಾಗಿದೆ. ಮುಂದೆಯೂ ಪನಾಮಾಕ್ಕೇ ಸೇರಿದ್ದಾಗಿರುತ್ತದೆ. ಕಾಲುವೆ ಮೂಲಕ ಸಾಗಲು ವಿಧಿಸುವ ಶುಲ್ಕವು ಪಾರದರ್ಶಕವಾಗಿದ್ದು, ಅದನ್ನು ಎಲ್ಲಾ ಆಯಾಮಗಳಿಂದ ಯೋಚಿಸಿ ನಿರ್ಧರಿಸಲಾಗಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.