ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಲೆಂಡ್ ಮೇಲೆ ಕ್ಷಿಪಣಿ ದಾಳಿ ಮಾಡಿತೇ ರಷ್ಯಾ?

Last Updated 16 ನವೆಂಬರ್ 2022, 16:13 IST
ಅಕ್ಷರ ಗಾತ್ರ

ವಾರ್ಸೌ: ಉಕ್ರೇನ್ ಗಡಿ ಬಳಿಯ ಪೋಲೆಂಡ್‌ನ ಹಳ್ಳಿಯೊಂದರಲ್ಲಿ ರಷ್ಯಾದ್ದು ಎಂದು ಹೇಳಲಾದ ಕ್ಷಿಪಣಿಯೊಂದು ಅಪ್ಪಳಿಸಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಪೋಲೆಂಡ್‌ನಲ್ಲಿ ಹೈ ಅಲರ್ಟ್ ಸೃಷ್ಟಿಸಿದ್ದು, ಅಲ್ಲಿನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಘಟನೆಯಲ್ಲಿ 60 ವರ್ಷದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಕ್ರೇನ್ ಗಡಿಗೆ ಕೇವಲ 5 ಕಿಮೀ ದೂರದಲ್ಲಿರುವಪೋಲೆಂಡ್‌ನ Przewodow ಎಂಬ ಹಳ್ಳಿಯಲ್ಲಿ ಕ್ಷಿಪಣಿ ಅಪ್ಪಳಿಸಿದೆ. ಸ್ಥಳಕ್ಕೆ ಪೋಲೆಂಡ್‌ ಸೇನಾ ಅಧಿಕಾರಿಗಳು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

ರಷ್ಯಾದ ಸೇನಾ ಅಧಿಕಾರಿಗಳು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಕ್ಷಿಪಣಿ ತಮ್ಮದಲ್ಲ ಎಂದು ಹೇಳಿದ್ದಾರೆ. ಆದರೆ, ಉಕ್ರೇನ್‌ನ ಸೇನಾ ಅಧಿಕಾರಿಗಳು ಅದು ರಷ್ಯಾ ನಿರ್ಮಿತ ಕ್ಷಿಪಣಿ ಎಂದು ಹೇಳಿದ್ದಾರೆ. ಈ ಬಗ್ಗೆ ರಷ್ಯಾದ ಉನ್ನತ ಸೇನಾ ಅಧಿಕಾರಿಗಳು ಪೋಲೆಂಡ್‌ಗೆ ರಷ್ಯಾದ ಮೇಲೆ ಆರೋಪ ಮಾಡುತ್ತಿರುವ ಬಗ್ಗೆ ಸ್ಷಷ್ಟನೆ ನೀಡಿ ಎಂದು ತಾಕೀತು ಮಾಡಿದೆ.

ಈ ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪೋಲೆಂಡ್‌ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಪೋಲೆಂಡ್‌ ನ್ಯಾಟೊದೊಂದಿಗೆ ಗುರುತಿಸಿಕೊಂಡಿದ್ದು, ನ್ಯಾಟೊ ಮುಖ್ಯಸ್ಥರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.ಉಕ್ರೇನ್ ಪೋಲೆಂಡ್‌ ಜೊತೆ ಗಡಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT