ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಮ್ಲಿನ್‌ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ವಿಫಲ

Published 3 ಮೇ 2023, 15:33 IST
Last Updated 3 ಮೇ 2023, 15:33 IST
ಅಕ್ಷರ ಗಾತ್ರ

ಮಾಸ್ಕೊ (ಎಪಿ): ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಹತ್ಯೆಗೈಯಲು ಉದ್ದೇಶಿಸಿದ್ದ ಉಕ್ರೇನ್‌, ಎರಡು ಡ್ರೋನ್‌ಗಳನ್ನು ಬಳಸಿ ರಾಜಧಾನಿ ಮಾಸ್ಕೊದ ಕ್ರೆಮ್ಲಿನ್‌ (ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸವಿರುವ ಅರಮನೆಗಳ ಸಮುಚ್ಛಯ) ಮೇಲೆ ದಾಳಿ ನಡೆಸಲು ತಡರಾತ್ರಿ ಪ್ರಯತ್ನಿಸಿದೆ ಎಂದು ರಷ್ಯಾ ಬುಧವಾರ ಆರೋಪಿಸಿದೆ.

ಡ್ರೋನ್‌ಗಳು ದಾಳಿ ಮಾಡುವ ಮೊದಲೇ ಅವುಗಳನ್ನು ರಷ್ಯಾ ಸೇನೆ ನಿಷ್ಕ್ರಿಯಗೊಳಿಸಿದೆ. ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಅಧ್ಯಕ್ಷ ಪುಟಿನ್‌ ಕ್ಷೇಮದಿಂದಿದ್ದಾರೆ. ಈಗಾಗಲೇ ನಿಗದಿಯಾಗಿರುವ ಅವರ ಕೆಲಸಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿಪತ್ರಿಕೆ ವರದಿ ಮಾಡಿದೆ.

ಕ್ರೆಮ್ಲಿನ್‌ನ ಅಧಿಕೃತ ವೆಬ್‌ಸೈಟ್‌ನಲ್ಲೂ ಈ ಕುರಿತು ಮಾಹಿತಿ ನೀಡಲಾಗಿದೆ. ಡ್ರೋನ್‌ನ ಅವಶೇಷಗಳು ಕ್ರೆಮ್ಲಿನ್‌ ಆವರಣದಲ್ಲಿ ಬಿದ್ದಿವೆ. ಇವುಗಳಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಅಲ್ಲಿಯ ಸ್ಥಳೀಯ ಕಾಲಮಾನದ ಪ್ರಕಾರ ನಸುಕಿನ ಜಾವ ಸುಮಾರು 2.30ರಲ್ಲಿ ಭಾರಿ ಸದ್ದು ಕೇಳಿರುವುದಾಗಿ ಮತ್ತು ಹೊಗೆ ಕಂಡುಬಂದಿದ್ದಾಗಿ ಹತ್ತಿರದ ವಸತಿ ಸಮುಚ್ಚಯದ ನಿವಾಸಿಗಳು ಹೇಳಿರುವುದಾಗಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ, ಡ್ರೋನ್‌ ಕೆಳಗೆ ಬೀಳಲು ನಿರ್ದಿಷ್ಟ ಕಾರಣವನ್ನು ನೀಡಲಾಗಿಲ್ಲ.

ಮೇ 9ರಂದು ನಡೆಯಲಿರುವ ವಾರ್ಷಿಕ ‘ವಿಜಯ ದಿನ’ಕ್ಕಾಗಿ ಸಿದ್ಧತೆ ನಡೆಸುವ ವೇಳೆಯೇ ಉಕ್ರೇನ್ ಈ ಪ್ರಯತ್ನ ನಡೆಸಿದೆ. ಈ ದಾಳಿಯನ್ನು ಯೋಜಿತ ಭಯೋತ್ಪಾದಕ ಕೃತ್ಯ ಎಂದೇ ನಾವು ಪರಿಗಣಿಸುತ್ತೇವೆ. ಪುಟಿನ್‌ ಅವರನ್ನು ಹತ್ಯೆಗೈಯಲೆಂದೇ ಈ ಪ್ರಯತ್ನ ನಡೆಸಲಾಗಿದೆ ಎಂದು ಕ್ರೆಮ್ಲಿನ್‌ ಹೇಳಿದೆ.

ಆದರೆ ಈ ದಾಳಿ ಕುರಿತ ಆರೋಪವನ್ನು ಸಾಬೀತುಪಡಿಸುವಂಥ ಯಾವುದೇ ಆಧಾರವನ್ನೂ ಕ್ರೆಮ್ಲಿನ್‌ ನೀಡಿಲ್ಲ. 

ಆರೋಪ ತಳ್ಳಿಹಾಕಿದ ಉಕ್ರೇನ್‌: ಈ ಆರೋಪದ ಕುರಿತು ಉಕ್ರೇನ್‌ ಉಕ್ರೇನ್‌ ಅಧ್ಯಕ್ಷರ ಸಲಹೆಗಾರ ಮೈಖೈಲೊ ಪೊಡೊಲ್ಯಾಜ್‌ ಪ್ರತಿಕ್ರಿಯೆ ನೀಡಿದ್ದಾರೆ. ‘ಕ್ರೆಮ್ಲಿನ್‌ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ನಾವು ಮಾಡಿಲ್ಲ. ಏಕೆಂದರೆ, ಈ ರೀತಿಯ ದಾಳಿಗಳಿಂದ ಸೇನಾ ಸಮಸ್ಯೆಗಳಿಗೆ ಪರಿಹಾರ ದೊರಕುವುದಿಲ್ಲ. ಜೊತೆಗೆ, ಉಪೇಕ್ಷೆ ಮಾಡುವ ಮೂಲಕ ಸದ್ಯದ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಈ ರೀತಿಯ ದಾಳಿಯಿಂದ ನಮಗೆ ಅನಾನುಕೂಲವೇ ಹೆಚ್ಚು ಎಂದು ನಮಗೆ ತಿಳಿದಿದೆ’ ಎಂದು  ಹೇಳಿದ್ದಾರೆ. 

‘ಎಲ್ಲದಕ್ಕಿಂತ ಹೆಚ್ಚಾಗಿ ಈ ರೀತಿಯ ದಾಳಿಗಳು ಉಕ್ರೇನ್‌ ಮೇಲೆ ನಡೆಸಿರುವ ಭಾರಿ ಪ್ರಮಾಣದ ದಾಳಿಗಳನ್ನು ಸಮರ್ಥಿಸಿಕೊಳ್ಳಲು ರಷ್ಯಾಗೆ ಅವಕಾಶ ನೀಡಲಿವೆ. ಇದಕ್ಕೆ ನಾವೇ ಏಕೆ ಅವಕಾಶ ನೀಡುತ್ತೇವೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT