ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಗೊರೊಡ್ ಮೇಲಿನ ಶೆಲ್‌ ದಾಳಿ ತಡೆಗೆ ಕ್ರಮ: ರಷ್ಯಾ

Published 9 ಜನವರಿ 2024, 15:13 IST
Last Updated 9 ಜನವರಿ 2024, 15:13 IST
ಅಕ್ಷರ ಗಾತ್ರ

ಮಾಸ್ಕೊ: ಗಡಿ ನಗರವಾದ ಬೆಲ್ಗೊರೊಡ್ ಮೇಲೆ ಉಕ್ರೇನ್‌ ಪಡೆಗಳು ನಡೆಸುತ್ತಿರುವ ಶೆಲ್ ದಾಳಿಯನ್ನು ತಡೆಯಲು ಸೇನಾ ಪಡೆಗಳು ಅಗತ್ಯ ಕ್ರಮ ಕೈಗೊಳ್ಳಲಿವೆ ಎಂದು ರಷ್ಯಾ ಮಂಗಳವಾರ ತಿಳಿಸಿದೆ. 

ಈ ನಗರದ ಮೇಲೆ ಉಕ್ರೇನ್‌ನ ಪಡೆಗಳು ಕೆಲವು ವಾರಗಳಿಂದ ಶೆಲ್‌ ದಾಳಿ ತೀವ್ರಗೊಳಿಸಿದ್ದು, ಇಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

 ಐರೋಪ್ಯ ದೇಶಗಳು ಪೂರೈಕೆ ಮಾಡಿರುವ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್‌ನ ಸೇನಾ ಪಡೆಗಳು ರಷ್ಯಾದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT