ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಅಧ್ಯಕ್ಷೀಯ ಚುನಾವಣೆ ಮಾರ್ಚ್‌ 17ಕ್ಕೆ: ಪುಟಿನ್‌ ಆಯ್ಕೆ ಸಾಧ್ಯತೆ

Published 7 ಡಿಸೆಂಬರ್ 2023, 14:18 IST
Last Updated 7 ಡಿಸೆಂಬರ್ 2023, 14:18 IST
ಅಕ್ಷರ ಗಾತ್ರ

ಮಾಸ್ಕೋ: ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು‌ ಮಾರ್ಚ್‌ 17ಕ್ಕೆ ನಿಗದಿಪಡಿಸಿದ್ದು, ವ್ಲಾಡಿಮಿರ್‌ ಪುಟಿನ್‌ ಅವರು ಐದನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ರಷ್ಯಾ ಸಂಸತ್‌ನ ಮೇಲ್ಮನೆಯು ಸರ್ವಾನುಮತದಿಂದ ಚುನಾವಣೆಯ ದಿನಾಂಕಕ್ಕೆ ಅನುಮೋದನೆ ನೀಡಿದೆ.

ಪುಟಿನ್‌ ಅವರು ಐದನೇ ಅವಧಿ‌ಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. 2020ರ ಸಾಂವಿಧಾನಿಕ ತಿದ್ದುಪಡಿಯ ನಂತರ ಅವರಿಗೆ ಇನ್ನೂ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶ ಇದೆ. 

ದಿನಾಂಕ ನಿಗದಿಯಾಗಿರುವುದರಿಂದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಕಾರ್ಯಗಳು ಆರಂಭವಾಗಲಿವೆ ಎಂದು ರಷ್ಯಾದ ಮೇಲ್ಮನೆ ಸ್ಪೀಕರ್‌ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ ತಿಳಿಸಿದ್ದಾರೆ.

’ರಷ್ಯಾವನ್ನು ದುರ್ಬಲಗೊಳಿಸಲು ಶತ್ರುಗಳು ಪ್ರಯತ್ನಿಸುತ್ತಿರುವ ನಡುವೆಯೂ ನಾವು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿದ್ದೇವೆ‘ ಎಂದು ಅವರು ಹೇಳಿದ್ದಾರೆ.

ಅಧಿಕೃತ ಘೋಷಣೆ ಹೊರಬೀಳದಿದ್ದರೂ 71 ವರ್ಷದ ಪುಟಿನ್‌ ಅವರು ಮುಂದಿನ ಆರು ವರ್ಷಗಳ ಅವಧಿಗಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪುಟಿನ್‌ ಅವರು ಮುಂದಿನ ವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಲಿದ್ದಾರೆ ಎಂದೂ ವಿವರಿಸಿವೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದ ನಂತರ ಪುಟಿನ್‌ ಅವರು ನಡೆಸುವ ಮೊದಲ ಪತ್ರಿಕಾಗೋಷ್ಠಿ ಇದಾಗಲಿದೆ.

ಉಕ್ರೇನ್‌ನ ಪ್ರದೇಶಗಳಾದ ಲುಗಾನ್ಸ್ಕ್‌, ಖೆರ್ಸನ್, ಡೊನೆಟ್‌ಸ್ಕ್‌ ಮತ್ತು ಝಪೋರಿಝಿಯಾದ ಮೆಲೆ ರಷ್ಯಾದ ಪಡೆಗಳು ಸಂಪೂರ್ಣ ನಿಯಂತ್ರಣ ಸಾಧಿಸದಿದ್ದರೂ ಈ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಷ್ಯಾವು ಹೇಳಿಕೊಂಡಿದೆ. ಅಲ್ಲದೆ ಈ ಪ್ರದೇಶಗಳಲ್ಲೂ ಮತದಾನ ನಡೆಸಲು ಚಿಂತನೆ ನಡೆಸಿದೆ.

ಪುಟಿನ್‌ ಅವರು ಅಧ್ಯಕ್ಷ ಅಥವಾ ಪ್ರಧಾನಿಯಾಗಿ 1999ರಿಂದಲೂ ಅಧಿಕಾರದಲ್ಲಿದ್ದಾರೆ. ಎರಡು ದಶಕಗಳಿಂದ ಅಧಿಕಾರದಲ್ಲಿರುವ ಅವರು ವಿರೋಧ ಪಕ್ಷಗಳ ಧ್ವನಿ ಅಡಗಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT