ಕೈವ್: ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಬೆನ್ನಲ್ಲೇ ರಷ್ಯಾದ ಭೂ ಸೇನೆ ದೇಶದ ಹಲವು ದಿಕ್ಕುಗಳಿಂದ ಗಡಿ ದಾಟಿ ಉಕ್ರೇನ್ ಪ್ರವೇಶಿಸಿವೆ.

ರಷ್ಯಾದ ಟ್ಯಾಂಕರ್‌ಗಳು ಮತ್ತು ಇತರ ಭಾರೀ ಯುದ್ಧೋಪಕರಣಗಳನ್ನು ಒಳಗೊಂಡ ಸೇನೆಯು ದೇಶದ ಉತ್ತರ ಭಾಗ ಮತ್ತು ದಕ್ಷಿಣದಲ್ಲಿ ರಷ್ಯಾ ವಶದಲ್ಲಿರುವ ಕ್ರಿಮಿಯಾದಿಂದ ಗಡಿಯನ್ನು ದಾಟಿವೆ ಎಂದು ಉಕ್ರೇನ್‌ನ ಗಡಿ ಭದ್ರತಾ ಪಡೆ ತಿಳಿಸಿದೆ.

ಈ ಮಧ್ಯೆ, ಲುಹಾನ್‌ಸ್ಕ್ ಪ್ರಾಂತ್ಯದಲ್ಲಿರುವ ಎರಡು ನಗರಗಳನ್ನು ಹಿಡಿತಕ್ಕೆ ಪಡೆದುಕೊಂಡಿರುವುದಾಗಿ ರಷ್ಯಾ ಬೆಂಬಲಿತ ಉಕ್ರೇನ್ ಪ್ರತ್ಯೇಕತಾವಾದಿಗಳು ಹೇಳಿಕೊಂಡಿದ್ದಾರೆ.

ರಷ್ಯಾದ 5 ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದು ಉರುಳಿಸಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ.

ಇದನ್ನೂ ಓದಿ..ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.