ಕೀವ್: ತಮ್ಮ ರಾಷ್ಟ್ರದ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿರುವ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ‘ರಷ್ಯಾ ಜೊತೆಗಿನ ಯುದ್ಧ ನಿಲ್ಲಿಸುವಲ್ಲಿ ಭಾರತದ ಪ್ರಯತ್ನದ ಮೇಲೆ ನಾವು ಅವಲಂಬಿತರಾಗಿದ್ದೇವೆ’ ಎಂದಿದ್ದಾರೆ.

‘ಶಾಂತಿ ಮತ್ತು ಮಾತುಕತೆ ಕುರಿತು ಭಾರತದ ಸಮರ್ಪಣೆಯನ್ನು ನಾವು ಶ್ಲಾಘಿಸುತ್ತೇವೆ. ಈ ಭಯಾನಕ ಯುದ್ಧವನ್ನು ಗೌರವಪೂರ್ವಕ ರೀತಿಯಲ್ಲಿ ಅಂತ್ಯಗೊಳಿಸಿ, ಶಾಶ್ವತವಾಗಿ ಶಾಂತಿ ನೆಲಸುವಂತೆ ಮಾಡಲು ಇಡೀ ವಿಶ್ವವೇ ಶ್ರಮಿಸುತ್ತಿದೆ. ಇದೇ ವೇಳೆ ನಾವು ಭಾರತದ ಪ್ರಯತ್ನವನ್ನೂ ಅವಲಂಬಿಸಿದ್ದೇವೆ’ ಎಂದರು.

‘ಪ್ರತಿಯೊಂದು ನಿರ್ಧಾರವೂ ರಾಜತಾಂತ್ರಿಕತೆಯನ್ನು ಶಕ್ತಿಯುತಗೊಳಿಸುತ್ತದೆ. ಜೊತೆಗೆ, ಇಂಥ ನಿರ್ಧಾರಗಳು ಐರೋಪ್ಯ ದೇಶಗಳ ಭದ್ರತೆಯನ್ನು ಮಾತ್ರವೇ ಉತ್ತಮಗೊಳಿಸುವುದಿಲ್ಲ. ಬದಲಿಗೆ ಹಿಂದೂ ಮಹಾಸಾಗರ–ಪೆಸಿಫಿಕ್ ಸಾಗರದಾಚೆಗೂ ಭದ್ರತೆ ಬಲಗೊಳಿಸುತ್ತವೆ’ ಎಂದು ಹೇಳಿದ್ದಾರೆ.

ಆಗಸ್ಟ್ 24ರ ಉಕ್ರೇನ್ನ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಪತ್ರ ಬರೆದಿದ್ದರು. ಭಾರತದ ಸ್ವಾತಂತ್ರ್ಯ ದಿನಕ್ಕೆ ಝೆಲೆನ್ಸ್ಕಿ ಅವರು ಶುಭಾಶಯ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.