ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Russia–Ukraine Conflict | ಹಾರ್ಕಿವ್‌ ಮೇಲೆ ಕ್ಷಿಪಣಿ ದಾಳಿ: 6 ಮಂದಿ ಸಾವು

Published 6 ಏಪ್ರಿಲ್ 2024, 14:52 IST
Last Updated 6 ಏಪ್ರಿಲ್ 2024, 14:52 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನ ದೊಡ್ಡ ನಗರ ಹಾರ್ಕಿವ್‌ ಮೇಲೆ ಶುಕ್ರವಾರ ರಾತ್ರಿ ರಷ್ಯಾ ಪಡೆಗಳು ಡ್ರೋನ್‌ ಮತ್ತು ಕ್ಷಿಪಣಿಗಳ ಮಳೆಗರೆದಿವೆ. ಈ ದಾಳಿಯಲ್ಲಿ 6 ನಾಗರಿಕರು ಹತರಾಗಿ, 11 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕ್ಷಿಪಣಿ ದಾಳಿಯಿಂದ ಜನವಸತಿ ಕಟ್ಟಡಗಳು, ಗ್ಯಾಸ್ ಸ್ಟೇಷನ್‌, ಶಿಶುವಿಹಾರ, ಕೆಫೆ, ಅಂಗಡಿಗಳು ಹಾಗೂ ಕಾರುಗಳು ಹಾನಿಗೀಡಾಗಿವೆ ಎಂದು ಹಾರ್ಕಿವ್‌ ನಗರದ ಗವರ್ನರ್‌ ಒಲೆಹ್‌ ಸಿನಿಹುಬೊವ್‌ ಹೇಳಿದ್ದಾರೆ.

‘ಇರಾನಿ ನಿರ್ಮಿತ 32 ಶಾಹಿದ್‌ ಡ್ರೋನ್‌ಗಳು ಮತ್ತು ಆರು ಕ್ಷಿಪಣಿಗಳನ್ನು ರಷ್ಯಾ ಶುಕ್ರವಾರ ರಾತ್ರಿ ಉಡಾಯಿಸಿದೆ. ಇದರಲ್ಲಿ ಮೂರು ಕ್ರೂಸ್‌ ಕ್ಷಿಪಣಿಗಳು ಮತ್ತು 28 ಡ್ರೋನ್‌ಗಳನ್ನು ನಮ್ಮ ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ರಷ್ಯಾದ ಕೊಲೆಗಡುಕರು, ಹಾರ್ಕಿವ್‌ ಮತ್ತು ಇತರ ಶಾಂತಿಯುತ ನಗರಗಳ ಮೇಲೆ ದಾಳಿ ನಡೆಸಿ, ಉಕ್ರೇನಿಗರನ್ನು ಭಯಭೀತಗೊಳಿಸುವುದನ್ನು ಮುಂದುವರಿಸಿದ್ದಾರೆ’ ಎಂದು ಉಕ್ರೇನ್‌ ಸೇನೆಯ ಲೆಪ್ಟಿನೆಂಟ್‌ ಜನರಲ್‌ ಮೈಕೊಲ ಒಲೆಶ್‌ಚುಕ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ದಾಳಿಯ ಬಗ್ಗೆ ರಷ್ಯಾ ಸೇನೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಉಕ್ರೇನ್ ಶನಿವಾರ ಬೆಳಿಗ್ಗೆ ರಷ್ಯಾದ ಮೇಲೆ ರಕ್ಕಸ  ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಲ್ಲಿ 10 ಕ್ಷಿಪಣಿಗಳನ್ನು ದೇಶದ ಗಡಿ ಭಾಗದ ಬೆಲ್ಗೊರೊಡ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳಿಂದ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT