ಸೋಲ್: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಲೀ ಕುನ್ ಹೀ (78) ಭಾನುವಾರ ನಿಧನರಾದರು. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅನ್ನು ವಿಶ್ವದ ಪ್ರಸಿದ್ಧ ಕಂಪನಿಯಾಗಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಲೀ ಅವರ ನಾಯಕತ್ವದಲ್ಲಿ ಸ್ಯಾಮ್‌ಸಂಗ್ ವಿಶ್ವದ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್ ತಯಾರಿಕಾ ಕಂಪನಿಯಾಗಿ ರೂಪುಗೊಂಡಿತ್ತು. ಕಂಪನಿಯ ಒಟ್ಟು ವಹಿವಾಟು ಈಗ ದಕ್ಷಿಣ ಕೊರಿಯಾ ಜಿಡಿಪಿಯ ಐದನೇ ಒಂದರಷ್ಟಿದೆ ಎಂದು ಪ್ರಕಟಣೆ ಉಲ್ಲೇಖಿಸಿದೆ.

2014ರಲ್ಲಿ ಹೃದಯಾಘಾತಕ್ಕೊಳಗಾಗಿದ್ದ ಅವರು ನಂತರ ಚೇತರಿಸಿಕೊಂಡಿರಲೇ ಇಲ್ಲ. ಬಳಿಕ ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗಪಡಿಸಲಾಗಿರಲಿಲ್ಲ. ಅಂತಿಮ ದಿನಗಳಲ್ಲಿಯೂ ಅವರ ಆರೋಗ್ಯದ ಕುರಿತಾದ ಮಾಹಿತಿಯನ್ನು ರಹಸ್ಯವಾಗಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.