ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ; ಚಾಲಕರ ಉದ್ಯೋಗಕ್ಕೆ ಕುತ್ತು?

Last Updated 10 ಜುಲೈ 2018, 7:14 IST
ಅಕ್ಷರ ಗಾತ್ರ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ಸಿಕ್ಕಿದ ನಂತರ ಹೌಸ್ ಡ್ರೈವರ್ ನೇಮಕಾತಿಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. 6 ತಿಂಗಳಲ್ಲಿ 30 ಸಾವಿರಗಿಂತಲೂ ಹೆಚ್ಚು ವಿದೇಶಿ ಹೌಸ್ ಡ್ರೈವರ್‍‍ಗಳನ್ನು ಅವರವರ ದೇಶಕ್ಕೆ ವಾಪಸ್ ಕಳಿಸಿರುವುದಾಗಿ ಅಂಕಿಅಂಶಗಳ ಪ್ರಾಧಿಕಾರಹೇಳಿದೆ.

ಸ್ವದೇಶೀಕರಣದಿಂದಾಗಿ ಸೌದಿಯಲ್ಲಿ ಕೆಲಸ ಕಳೆದುಕೊಳ್ಳುತ್ತಿರುವಅನಿವಾಸಿಗಳ ಸರಾಸರಿ ಸಂಖ್ಯೆ 2602 ಆಗಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಎರಡು ವಾರಗಳ ಹಿಂದೆ ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸುವ ಅನುಮತಿ ನೀಡಲಾಗಿತ್ತು.ಏತನ್ಮಧ್ಯೆ,ಹೌಸ್ ಡ್ರೈವರ್ ನೇಮಕಾತಿಯಲ್ಲಿ ಶೇ. 25ರಷ್ಟು ಇಳಿಕೆ ಕಂಡುಬಂದಿದೆ. ಮುಂದಿನ ವರ್ಷದಲ್ಲಿ ಇದು ಶೇ. 50ನ್ನು ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಭಾರತ, ಇಂಡೋನೇಷ್ಯಾ, ಫಿಲಿಪ್ಪಿನ್ಸ್ ಮೊದಲಾದ ದೇಶಗಳಿಂಗ ಹೆಚ್ಚಾಗಿ ಹೌಸ್ ಡ್ರೈವರ್‌ಗಳನ್ನು ನೇಮಕ ಮಾಡಲಾಗುತ್ತದೆ.ಸೌದಿಯಲ್ಲಿ ಮೂರು ಲಕ್ಷಕ್ಕಿಂತಲೂ ಭಾರತೀಯ ಚಾಲಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.ಎರಡು ವರ್ಷಗಳಲ್ಲಿ ಸೌದಿಯಲ್ಲಿ ಚಾಲಕರಾಗಿರುವ ಶೇ.40ರಷ್ಟು ವಿದೇಶಿಯರಿಗೆಕೆಲಸ ನಷ್ಟವಾಗುವ ಸಾಧ್ಯತೆಗಳಿವೆ.

ಮಹಿಳೆಯರು ವಾಹನ ಚಲಾಯಿಸುವುದರಿಂದಾಗಿ ಸ್ವದೇಶಿ ಕುಟುಂಬಗಳ ಖರ್ಚು ಕಡಿಮೆ ಆಗುವುದರ ಜತೆಗೆ ಅನ್ಯ ರಾಷ್ಟ್ರಗಳಿಗೆ ಹರಿದು ಹೋಗುವ ಹಣದ ಪ್ರಮಾಣವನ್ನೂ ಕಡಿಮೆಯಾಗಲಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಮಾಜಿ ಉಪಾಧ್ಯಕ್ಷ ಡಾ. ಸಾಮಿ ಅಲ್ ಅಬ್ದುಲ್ ಕರೀಂ ಹೇಳಿದ್ದಾರೆ.

ಇದೀಗ ಇಲ್ಲಿ 1.36 ಲಕ್ಷ ಹೌಸ್ ಡ್ರೈವರ್‌‍ಗಳು ಇದ್ದಾರೆ.ಈ ವರ್ಷ ಮಾರ್ಚ್ ತಿಂಗಳವರೆಗಿನ ಲೆಕ್ಕದ ಪ್ರಕಾರ ಪ್ರತಿ ತಿಂಗಳು 7,500 ಹೌಸ್ ಡ್ರೈವರ್‌ಗಳು ಫೈನಲ್ ಎಕ್ಸಿಟ್ ನಲ್ಲಿ ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ಅಂಕಿಅಂಶಗಳ ಪ್ರಾಧಿಕಾರ ಹೇಳಿದೆ.
ಅದೇ ವೇಳೆ ಸ್ವದೇಶೀಕರಣ ನಡೆಯುತ್ತಿದ್ದಂತೆ ಸೌದಿಯಲ್ಲಿ ಪ್ರತಿ ತಿಂಗಳು ಸರಾಸರಿ 35,000 ವಿದೇಶಿ ಕೆಲಸಗಾರರನ್ನು ನೇಮಕ ಮಾಡಲಾಗಿದೆ.ಈ ವರ್ಷದ ತ್ರೈಮಾಸಿಕ ಲೆಕ್ಕ ಪ್ರಕಾರ 1.06 ಲಕ್ಷ ವೀಸಾಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT