ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಾಗೊದಲ್ಲಿ ಗುಂಡಿನ ದಾಳಿ: 7 ಜನ ಸಾವು– ಗನ್ ಹಿಡಿದ ಹಂತಕ ಪರಾರಿ!

ಹಂತಕನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ
Published 23 ಜನವರಿ 2024, 2:37 IST
Last Updated 23 ಜನವರಿ 2024, 2:37 IST
ಅಕ್ಷರ ಗಾತ್ರ

ಚಿಕಾಗೊ: ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 7 ಜನ ಮೃತಪಟ್ಟಿರುವ ಘಟನೆ ಅಮೆರಿಕದ ಚಿಕಾಗೊದಲ್ಲಿ ಸೋಮವಾರ ನಡೆದಿದೆ.

ಚಿಕಾಗೊ ಹೊರವಲಯದ ಎರಡು ಮನೆಗಳಲ್ಲಿ ಆಗಂತುಕ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಚಿಕಾಗೊದ ಜೊಲೈಟ್ ಪ್ರದೇಶದ 2200 block of West Acres Road ಎಂಬಲ್ಲಿ ನಡೆದಿದೆ. ಈ ಬಗ್ಗೆ ಜೊಲೈಟ್ ಪೊಲೀಸರು ಆರೋಪಿಯ ಫೋಟೊ ಮತ್ತು ಅವನು ಕೃತ್ಯಕ್ಕೆ ಬಳಸಿದ ಕಾರಿನ ಚಿತ್ರವನ್ನು X ತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಆರೋಪಿಯನ್ನು 22 ವರ್ಷದ ರೊಮಿಯೊ ನ್ಯಾನ್ಸ್‌ ಎಂದು ಗುರುತಿಸಲಾಗಿದೆ.

ಅವನು ಅಪಾಯಕಾರಿ ಆಯುಧ ಹಿಡಿದು ಕೆಂಪು ಟೊಯೊಟೊ ಕಾರಿನಲ್ಲಿ ಪರಾರಿಯಾಗಿದ್ದಾನೆ. ಅವನ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದೇವೆ. ನಾಗರಿಕರು ಮನೆಯಿಂದ ಹೊರಬರದೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT