ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸಂಸತ್‌ ವಿಸರ್ಜನೆ; ಜನವರಿ 5ರಂದು ಚುನಾವಣೆ

Last Updated 10 ನವೆಂಬರ್ 2018, 3:06 IST
ಅಕ್ಷರ ಗಾತ್ರ

ಕೊಲೊಂಬೊ: ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆಶ್ರೀಲಂಕಾ ಸಂಸತ್‌ ಅನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಿಸರ್ಜನೆ ಮಾಡಿದರು.

225 ಸದಸ್ಯರ ಸಂಸತ್ತಿನಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆ ಬಹುಮತ ಸಾಬೀತುಪಡಿಸಲು ವಿಫಲರಾದ ಬಳಿಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಈ ನಿರ್ಧಾರ ಪ್ರಕಟಿಸಿದ್ದು, 2019ರ ಜನವರಿ 5ಕ್ಕೆ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದ್ದಾರೆ. ಇದರಿಂದ ಎರಡು ವರ್ಷಗಳ ಮೊದಲೇ ಚುನಾವಣೆ ನಡೆಯಲಿದೆ.

ಪ್ರಧಾನಿ ಸ್ಥಾನಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಸಂಸತ್‌ ವಿಸರ್ಜನೆಗೆ ಎಡೆಮಾಡಿಕೊಟ್ಟಿದೆ. 2015ರಲ್ಲಿ ಸರ್ಕಾರ ರಚನೆಯ ಕಸರತ್ತಿನಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ರನಿಲ್ ವಿಕ್ರಮಸಿಂಘೆ ಅವರೊಂದಿಗೆ ಕೈಜೋಡಿಸಿದ್ದರು. ಪ್ರಧಾನಿಯಾಗಿದ್ದ ರನಿಲ್‌ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್‌ 26ರಂದು ಸಿರಿಸೇನ ಪದಚ್ಯುತಗೊಳಿಸಿ,ಪ್ರಧಾನಿ ಹುದ್ದೆಗೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಲಾಗಿತ್ತು.

ಈ ಬೆಳವಣಿಗೆಗೆ ವಿರೋಧ ವಿಕ್ರಮಸಿಂಘೆ ವಿರೋಧ ವ್ಯಕ್ತಪಡಿಸುವ ಜತೆಗೆ ಸ್ಪೀಕರ್‌ ಮೊರೆ ಹೋಗಿದ್ದರು. ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಸಿರಿಸೇನ ಅವರ ಅಸಾಂವಿಧಾನಿಕ ನಡೆಗೆ ಟೀಕೆ ವ್ಯಕ್ತವಾಗಿತ್ತು. ಸಂಸತ್ತನ್ನು ಅಮಾನತ್ತಿನಲ್ಲಿ ಇಟ್ಟ ಕ್ರಮವನ್ನು ಸ್ಪೀಕರ್‌ ಪ್ರಶ್ನಿಸಿ, ಇದರಿಂದ ದೇಶದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ವಿಕ್ರಮಸಿಂಘೆ ಸಂಸತ್ತಿನಲ್ಲಿ ಬಹುಮತ ಸಾಬೀತಿಗೆ ಪಟ್ಟು ಹಿಡಿದಿದ್ದರಿಂದ ನ.9ರಂದು ಮಹಿಂದ ರಾಜಪಕ್ಸ ವಿಶ್ವಾಸ ಮತಯಾಚಿಸಿದ್ದರು. ಎಎಫ್‌ಪಿ ಪ್ರಕಾರ, ವಿಕ್ರಮಸಿಂಘೆ 120 ಸಂಸದರ ಬೆಂಬಲ ಹೊಂದಿದ್ದಾರೆ. ರಾಜಪಕ್ಸೆ ಮತ್ತು ಸಿರಿಸೇನ 104 ಸಂಸದರ ಬೆಂಬಲ ಹೊಂದಿದ್ದಾರೆ. ಸ್ಪೀಕರ್‌ 225ನೇ ಸದಸ್ಯರಾಗಿದ್ದು ಅವರು ಯಾವುದೇ ಪಕ್ಷದ ಪರವಾಗಿ ನಿಲ್ಲುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT