ಬೆಂಗಳೂರು: ಇಂಥ ಸ್ಥಳದಲ್ಲಿ ಕಡಿಮೆ ಖರ್ಚಿನಲ್ಲಿ ಅದ್ಧೂರಿ ಮದುವೆ ಮಾಡಿಸಿ ಕೊಡುತ್ತೇನೆ ಎಂದು ಯುವಕ–ಯುವತಿಯರನ್ನು ವಂಚಿಸುತ್ತಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ದಕ್ಷಿಣ ಆಫ್ರಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಪ್ರೇಲಿನ್ ಮೋಹನಲಾಲ್ ಎನ್ನುವ 53 ವರ್ಷದ ಮಹಿಳೆ ಬಂಧನಕ್ಕೆ ಒಳಗಾದವರು.

ಸಾಮಾಜಿಕ ಮಾಧ್ಯಮಗಳ ಮೂಲಕ ನವ ಜೋಡಿಗಳನ್ನು ಸಂಪರ್ಕಿಸುತ್ತಿದ್ದ ಪ್ರೇಲಿನ್, ಫೋಟೊ–ವಿಡಿಯೊಗಳ ಮೂಲಕ ನಕಲಿ ಮದುವೆ ಮಂಟಪವನ್ನು ಸೃಷ್ಟಿ ಮಾಡಿ ಜೋಡಿಗಳನ್ನು ನಂಬಿಸುತ್ತಿದ್ದರು. ಅವರಿಂದ ಹಣ ಪಡೆದು ಪ್ರೇಲಿನ್ ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಮದುವೆ ಮಾಡಿಕೊಳ್ಳಲು ನಿಗದಿತ ಸ್ಥಳಕ್ಕೆ ಬರುವ ಜೋಡಿಗಳಿಗೆ ಫೋಟೊ, ವಿಡಿಯೊದಲ್ಲಿ ನೋಡಿದ್ದ ಮದುವೆ ಮಂಟಪ ಇಲ್ಲ ಎಂದು ಮೋಸ ಹೋಗುತ್ತಿದ್ದರು ಎಂದು ದೂರಲಾಗಿದೆ.

ಇದೇ ರೀತಿ ಪ್ರೇಲಿನ್ ಅವರು 17 ಜೋಡಿಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ವೃತ್ತಿಯಲ್ಲಿ ತಾನು ವಕೀಲೆ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರೇಲಿನ್ ಮೋಹನಲಾಲ್ ಅವರನ್ನು RUSA ಎಂಬ ಭದ್ರತಾ ಏಜನ್ಸಿ ಬಂಧಿಸಿ, ವಿಚಾರಣೆ ನಡೆಸಿದೆ.

ಜೋಡಿಗಳಿಗೆ ಹಣವನ್ನು ಮರಳಿ ಕೊಡುತ್ತೇನೆ ಎಂದು ಭರವಸೆ ನೀಡಿರುವುದರಿಂದ ಭದ್ರತಾ ಏಜನ್ಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
.Google Maps ನಂಬಿ ನಾಗಾಲ್ಯಾಂಡ್ಗೆ ಹೋಗಿ ಫಜೀತಿಪಟ್ಟ ಅಸ್ಸಾಂ ಪೊಲೀಸರು!.ಲಾಸ್ ಏಂಜಲೀಸ್: ಭೀಕರ ಕಾಳ್ಗಿಚ್ಚಿನಿಂದ ಪಾರಾದ ನೋರಾ ಫತೇಹಿ, ಬೆಚ್ಚಿದ ಪ್ರಿಯಾಂಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.