ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೊಲಿನದಲ್ಲಿ ಗರ್ಭಪಾತ ನಿಷೇಧ–ಮಸೂದೆಗೆ ಅಂಗೀಕಾರ

Last Updated 18 ಫೆಬ್ರುವರಿ 2021, 7:22 IST
ಅಕ್ಷರ ಗಾತ್ರ

ಕೊಲಂಬಿಯಾ: ಕೆಲವು ನಿರ್ದಿಷ್ಟ ಕಾರಣ ಹೊರತುಪಡಿಸಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಯೊಂದನ್ನು ದಕ್ಷಿಣ ಕೆರೊಲಿನಾ ರಾಜ್ಯದ ಶಾಸನಸಭೆ ಅಂಗೀಕರಿಸಿದೆ.

ಗರ್ಭಿಣಿಯರ ಸ್ವಾತಂತ್ರ್ಯವನ್ನುರಕ್ಷಣೆ ಮಾಡುವಂತಹ ಹಾಗೂ ಗರ್ಭಪಾತಕ್ಕೆ ಅವಕಾಶ ನೀಡುವ ‘ರೋಯಿ ವಿ. ವೇಡ್‘ ನಿಯಮ ಸದ್ತ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಮಾತ್ರ ಇದನ್ನು ಬದಲಿಸಲು ಸಾಧ್ಯವಿದೆ. ದಕ್ಷಿಣ ಕೆರೊಲಿನಾದಂತೆ ಅಮೆರಿಕದ 12ಕ್ಕೂ ಅಧಿಕ ರಾಜ್ಯಗಳಲ್ಲಿ ಈಗಾಗಲೇ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಆದರೆ ಇದನ್ನು ವಿರೋಧಿಸುವವರ ಸಂಖ್ಯೆಯೂ ದೊಡ್ಡದಾಗಿದ್ದು, ಎಲ್ಲಾ ರಾಜ್ಯಗಳಲ್ಲೂ ದಾವೆ ಹೂಡಿದ್ದಾರೆ. ಹೀಗಾಗಿ ಕೋರ್ಟ್‌ ತಡೆಯಾಜ್ಞೆಯ ಕಾರಣ ಯಾವೊಂದು ರಾಜ್ಯದಲ್ಲೂ ಇದು ಅನುಷ್ಠಾನಕ್ಕೆ ಬಂದಿಲ್ಲ.‌

ದಕ್ಷಿಣಕರೊಲಿನಾ ಮಸೂದೆ: ‘ಗರ್ಭಪಾತಕ್ಕೆ ಮೊದಲು ವೈದ್ಯರು ಅಲ್ಟ್ರಾಸೌಂಡ್‌ ಪರೀಕ್ಷೆ ಮೂಲಕ ಭ್ರೂಣಕ್ಕೆ ಹೃದಯಬಡಿತ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಇದೆ ಎಂದಾದರೆ ಗರ್ಭಪಾತ ಮಾಡುವಂತಿಲ್ಲ. ಅತ್ಯಾಚಾರ, ಬಲಾತ್ಕಾರದಿಂದ ಸಂಭೋಗ ಅಥವಾ ತಾಯಿಯ ಜೀವಕ್ಕೆ ಅಪಾಯ ಇದೆ ಎಂಬ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಯಾವ ಸಂದರ್ಭದಲ್ಲೂ ಗರ್ಭಪಾತ ಮಾಡುವಂತಿಲ್ಲ. ಮಾಡಿದ್ದೇ ಆದರೆ ಮಾಡಿಸಿಕೊಂಡ ಮಹಿಳೆಗೆ ಶಿಕ್ಷೆ ಇಲ್ಲ, ಬದಲಿಗೆ ಗರ್ಭಪಾತ ಮಾಡಿ ಆರೋಪ ಸಾಬೀತುಗೊಂಡ ವೈದ್ಯರಿಗೆ 2 ವರ್ಷ ಜೈಲು, 10 ಸಾವಿರ ಡಾಲರ್ ದಂಡ ವಿಧಿಸಬಹುದಾಗಿದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT