ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರು ದೇಶದ ಹೊಸ ಪ್ರಧಾನ ಮಂತ್ರಿಯಾಗಿ ಭಾನುವಾರ ಇತಿಹಾಸ ಪ್ರಸಿದ್ಧ ಬೌದ್ಧ ದೇವಾಲಯವೊಂದರಲ್ಲಿ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ದೇಶದ ರಾಜಕಾರಣದಲ್ಲಿ ತಮ್ಮ ಕುಟುಂಬದ ಹಿಡಿತವನ್ನು ಬಿಗಿಗೊಳಿಸಲು ಮುನ್ನುಡಿ ಬರೆಯಲಿದ್ದಾರೆ.

ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ಎಲ್ಪಿಪಿ)ಯ 74 ವರ್ಷದ ನಾಯಕ ರಾಜಪಕ್ಸ ದೇಶದ ಒಂಬತ್ತನೇ ಸಂಸತ್ತಿನ ಚುನಾವಣೆಯಲ್ಲಿ ವೈಯಕ್ತಿಕ 5,00,000 ಆದ್ಯತೆಯ ಮತಗಳನ್ನು ಪಡೆದು ಶ್ರೀಲಂಕಾದ ಚುನಾವಣಾ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಉತ್ತರ ಕೊಲಂಬೊ ಉಪನಗರವಾದ ಕೆಲಾನಿಯಾದ ಪವಿತ್ರ ರಾಜಮಹಾ ವಿಹಾರಾಯದಲ್ಲಿ ಭಾನುವಾರ ಅವರ ಪ್ರಮಾಣ ವಚನ ಸ್ವೀಕರ ಸಮಾರಂಭ ನಡೆಯಲಿದೆ.

ಶ್ರೀಲಂಕಾ ಸಂಸತ್ನ ಒಟ್ಟಾರೆ 225 ಕ್ಷೇತ್ರಗಳ ಪೈಕಿ ರಾಜಪಕ್ಸೆ ನೇತೃತ್ವದ ಎಸ್ಎಲ್ಪಿಪಿ 145 ಕ್ಷೇತ್ರಗಳಲ್ಲಿ ಗೆದ್ದು ತ್ರಿವಿಕ್ರಮ ಮೆರೆದಿದೆ. ಇದರ ಜೊತೆಗೆ ಎಸ್ಎಲ್ಪಿಪಿಯ ಮಿತ್ರಪಕ್ಷಗಳು 5 ಕ್ಷೇತ್ರಗಳಲ್ಲಿ ಗೆದ್ದಿದ್ದು, ಮೈತ್ರಿಕೂಟದ ಸಂಖ್ಯೆ 150ಕ್ಕೇರಿದೆ. ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಎಸ್ಎಲ್ಪಿಪಿ ಶೇ. 59.9 ಮತಗಳನ್ನು ಪಡೆದಿದೆ.

ಸೋಮವಾರ ಸಚಿವ ಸಂಪುಟ ರಚನೆಯಾಗಲಿದ್ದು, ನಂತರ ಉಪ ಸಚಿವರು, ರಾಜ್ಯ ಸಚಿವರು ನೇಮಕಗೊಳ್ಳಲಿದ್ದಾರೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಮಹಿಂದಾ ರಾಜಪಕ್ಸ ಅವರ ಸೋದರ ಗೋಟಬಯಾ ರಾಜಪಕ್ಸ ಅವರು ಸದ್ಯ ದೇಶದ ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.