ಕಾಬೂಲ್: ಪಾಕಿಸ್ತಾನಕ್ಕೆ ಪ್ರಯಾಣಿಸಲು ವೀಸಾಗೆ ಅರ್ಜಿ ಸಲ್ಲಿಸುವುದಕ್ಕಾಗಿ ಬುಧವಾರ ಇಲ್ಲಿನ ಕ್ರೀಡಾಂಗಣವೊಂದರಲ್ಲಿ ಸಾವಿರಾರು ಜನರು ಜಮಾಯಿಸಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 11 ಮಹಿಳೆಯರು ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ವೀಸಾ ಪಡೆಯಲು ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದ ಕಾರಣ ಕ್ರೀಡಾಂಗಣದಲ್ಲಿ ಇವುಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪಿಡುಗಿನ ಕಾರಣದಿಂದಾಗಿ ಮುಚ್ಚಿದ್ದ ಗಡಿಯನ್ನು ಪಾಕಿಸ್ತಾನವು ಸೆಪ್ಟೆಂಬರ್‌ನಲ್ಲಿ ತೆರೆದಿದ್ದು, ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ 19 ಸಾವಿರಕ್ಕೂ ಅಧಿಕ ವೀಸಾಗಳನ್ನು ನೀಡಿರುವುದಾಗಿ ಕಾಬೂಲ್‌ನಲ್ಲಿ ಇರುವ ಪಾಕಿಸ್ತಾನದ ರಾಯಭಾರ ಕಚೇರಿ ತಿಳಿಸಿದೆ.

34 ಪೊಲೀಸರ ಸಾವು: ಪ್ರತ್ಯೇಕ ಘಟನೆಯೊಂದರಲ್ಲಿ, ಅಫ್ಗಾನಿಸ್ತಾನದ ಉತ್ತರ ಭಾಗದಲ್ಲಿ ತಾಲಿಬಾನ್ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ 34 ಪೊಲೀಸರು ಮೃತಪಟ್ಟಿದ್ದಾರೆ.

ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ‘ಘಟನೆಯಲ್ಲಿ 34 ಪೊಲೀಸರು ಮೃತಪಟ್ಟಿದ್ದಾರೆ. ಭದ್ರತಾ ಪಡೆಯ ಎಂಟು ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ಟಕ್ಹಾರ್ ಪ್ರಾಂತ್ಯದಲ್ಲಿರುವ ಆಸ್ಪತ್ರೆಯ ನಿರ್ದೇಶಕ ರಹೀಮ್ ಡ್ಯಾನಿಶ್ ತಿಳಿಸಿದರು.

‘ಹೊಂಚು ದಾಳಿ ನಡೆಸಿದ ಉಗ್ರರು ಹಲವು ಪೊಲೀಸ್ ವಾಹನಗಳನ್ನು ಸುಟ್ಟುಹಾಕಿದರು. ಘಟನೆಯಲ್ಲಿ ಉಪಪೊಲೀಸ್ ಮುಖ್ಯಸ್ಥರೂ ಮೃತಪಟ್ಟಿದ್ದಾರೆ’ ಎಂದು ಪ್ರಾಂತ್ಯ ಸರ್ಕಾರದ ವಕ್ತಾರ ಜವಾದ್ ಹಿಜ್ರಿ ತಿಳಿಸಿದರು. ಇಲ್ಲಿಯವರೆಗೂ ಈ ದಾಳಿಯ ಹೊಣೆಯನ್ನು ತಾಲಿಬಾನ್ ಅಥವಾ ಇನ್ನಿತರೆ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನೂ ತಾಲಿಬಾನ್ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.