ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಆರೇಬಿಯಾ: ಮಕ್ಕಳು 20ಕ್ಕಿಂತ ಹೆಚ್ಚು ದಿನ ಶಾಲೆಗೆ ಗೈರಾದರೆ ಪೋಷಕರಿಗೆ ಜೈಲು

Published 30 ಆಗಸ್ಟ್ 2023, 10:06 IST
Last Updated 30 ಆಗಸ್ಟ್ 2023, 10:06 IST
ಅಕ್ಷರ ಗಾತ್ರ

ಸೌದಿ ಆರೇಬಿಯಾ: ಸರಿಯಾಗಿ ಶಾಲೆಗೆ ಹೋಗದೇ ಇದ್ದರೆ ಸಾಮಾನ್ಯವಾಗಿ ಮಕ್ಕಳಿಗೆ ಶಿಕ್ಷೆ ನೀಡುತ್ತಾರೆ. ಆದರೆ ಈ ದೇಶದಲ್ಲಿ 20 ದಿನಕ್ಕಿಂತ ಹೆಚ್ಚು ದಿನ ಮಕ್ಕಳು ಶಾಲೆಗೆ ಗೈರಾದರೆ ಪೋಷಕರಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. 

ಇಂಥಹದ್ದೊಂದು ನಿಯಮ ಜಾರಿಗೆ ಬಂದಿರುವುದು ಸೌದಿ ಆರೇಬಿಯಾ ದೇಶದಲ್ಲಿ. ಸರಿಯಾದ ಕಾರಣ ಇಲ್ಲದೆ ಮಕ್ಕಳು 20 ದಿನಕ್ಕಿಂತ ಹೆಚ್ಚು ದಿನ ಶಾಲೆಗೆ ಹೋಗದೆ ಇದ್ದರೆ ದೇಶದ ಮಕ್ಕಳ ರಕ್ಷಣೆ ಕಾನೂನಿನ ಪ್ರಕಾರ ತಂದೆ–ತಾಯಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಈ ನಿಯಮದ ಹಿಂದಿನ ಸದುದ್ದೇಶವಾಗಿದೆ. ಈ ಕುರಿತು ಗಲ್ಫ್‌ ನ್ಯೂಸ್‌ ವರದಿಯನ್ನು ಉಲ್ಲೇಖಿಸಿ ಎನ್‌ಡಿಟಿವಿಯಲ್ಲಿ ವರದಿಯಾಗಿದೆ.

ಈ ರೀತಿ ಪೋಷಕರನ್ನು ಬಂಧಿಸಲು ಹಲವು ಹಂತಗಳಿವೆ. ಮೊದಲು ಶಾಲೆಯ ಪ್ರಾಂಶುಪಾಲರು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ವರದಿ ನೀಡಬೇಕು, ನಂತರ ಶಿಕ್ಷಣ ಸಚಿವಾಲಯ ಹಾಗೂ ಕುಟುಂಬ ಆರೈಕೆ ಇಲಾಖೆ ತನಿಖೆ ನಡೆಸಲಿದೆ. ಅದಾದ ಬಳಿಕ ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಈ ಮಧ್ಯೆ ಮಗುವಿನ ಪೋಷಕರು ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT