ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದೊಂದಿಗಿನ ಸಂಘರ್ಷ ತಗ್ಗಲಿ: ಸುನಕ್‌–ಟ್ರೂಡೊ ಪ್ರತಿಪಾದನೆ

ಉಭಯ ನಾಯಕರ ನಡುವೆ ದೂರವಾಣಿ ಮೂಲಕ ಮಾತುಕತೆ
Published 7 ಅಕ್ಟೋಬರ್ 2023, 11:05 IST
Last Updated 7 ಅಕ್ಟೋಬರ್ 2023, 11:05 IST
ಅಕ್ಷರ ಗಾತ್ರ

ಲಂಡನ್: ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ನಂತರ ಭಾರತ ಮತ್ತು ಕೆನಡಾ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಸಂಘರ್ಷವನ್ನು ಶಮನ ಮಾಡುವ ಅಗತ್ಯ ಇದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಹಾಗೂ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದ್ದಾರೆ.

ಸುನಕ್‌ ಅವರು ಟ್ರೂಡೊ ಜತೆ ಶುಕ್ರವಾರ ದೂರವಾಣಿ ಮೂಲಕ ನಡೆಸಿದ ಮಾತುಕತೆ ವೇಳೆ ಭಾರತ–ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಕುರಿತು ಹೆಚ್ಚು ಚರ್ಚೆ ನಡೆಯಿತು ಎಂದು ಬ್ರಿಟನ್‌ ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಎರಡೂ ದೇಶಗಳು ಸ್ಥಾಪಿತ ನಿಯಮಗಳನ್ನು ಗೌರವಿಸಬೇಕು ಎಂಬ ಬಗ್ಗೆ ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು’ ಎಂದೂ ಪ್ರಕಟಣೆ ತಿಳಿಸಿದೆ.

ನಿಜ್ಜರ್‌ ಹ‌ತ್ಯೆಗೆ ಸಂಬಂಧಿಸಿ ಭಾರತ ವಿರುದ್ಧ ಕೆನಡಾ ಆರೋಪಗಳನ್ನು ಮಾಡಿದೆ. ಆದರೆ, ಇಂಥ ವಿಷಯಗಳಲ್ಲಿ ಎಲ್ಲ ದೇಶಗಳು ಪರಸ್ಪರರ ಸಾರ್ವಭೌಮತೆ ಹಾಗೂ ಕಾನೂನುಗಳನ್ನು ಗೌರವಿಸಬೇಕು ಎಂಬ ಬ್ರಿಟನ್‌ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಸುನಕ್‌ ಸ್ಪಷ್ಟಪಡಿಸಿದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಜಸ್ಟಿನ್‌ ಟ್ರೂಡೊ
ಜಸ್ಟಿನ್‌ ಟ್ರೂಡೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT