ಯಾಂಗೂನ್: ಮಯನ್ಮಾರ್ ರಾಷ್ಟ್ರೀಯ ಸಂಸತ್‌ನ ಮೇಲ್ಮನೆ ಮತ್ತು ಕೆಳಮನೆಯ ಸ್ಥಾನಗಳಿಗಾಗಿ ಭಾನುವಾರ ಮತದಾನ ನಡೆದಿದ್ದು ಆಂಗ್ ಸಾನ್ ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಮತ್ತೆ ಅಧಿಕಾರದ ಗದ್ದುಗೆಗೆ ಏರುವ ನಿರೀಕ್ಷೆ ಇದೆ.

ಸಂಸತ್‌ನ ಮೇಲ್ಮನೆ ಮತ್ತು ಕೆಳ ಮನೆಯ ಸ್ಥಾನಗಳಿಗಾಗಿ 90ಕ್ಕೂ ಹೆಚ್ಚು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಸೂಕಿ ಅವರ ಎನ್‌ಎಲ್‌ಡಿ ಪಕ್ಷವು 2015ರ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಿತ್ತು. ಮಿಲಿಟರಿ ಬೆಂಬಲ ಹೊಂದಿರುವ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್‌ಮೆಂಟ್ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿತ್ತು.

ಮಯನ್ಮಾರ್‌ನ ಪ್ರಮುಖ ನಗರವಾಗಿರುವ ಯಾಂಗೂನ್‌ನಲ್ಲಿ ಮತದಾರರು ಅತ್ಯುತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗೆ ಬರುವವರು ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಕೆಲವರು ಕೈಗವಸು ಹಾಗೂ ಫೇಸ್ ಶೀಲ್ಡ್ ಧರಿಸಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳೂ ಕಂಡುಬಂದವು. ಅಧಿಕಾರಿಗಳು ಮತ ಗಟ್ಟೆಗೆ ಬಂದವರ ದೇಹದ ಉಷ್ಣಾಂಶ ಪರೀಕ್ಷಿಸುವುದರ ಜೊತೆಗೆ ಎಲ್ಲರ ಕೈಗಳಿಗೂ ಸ್ಯಾನಿಟೈಸರ್ ಹಾಕುವುದರಲ್ಲಿ ನಿರತರಾಗಿರುವುದೂ ಕಂಡುಬಂತು.

75 ವರ್ಷ ವಯಸ್ಸಿನ ಸೂಕಿ ಹೋದ ತಿಂಗಳ ಅಂತ್ಯದಲ್ಲೇ ಮತ ಚಲಾಯಿಸಿದ್ದರು. ಸೋಮವಾರ ಬೆಳಿಗ್ಗೆ ಯಿಂದ ಚುನಾವಣಾ ಫಲಿತಾಂಶ ಪ್ರಕಟಿ ಸಲು ಆರಂಭಿಸುವುದಾಗಿ ಚುನಾವಣಾ ಆಯೋಗ ಹೇಳಿದೆ.

‘ಸೂಕಿ ಅವರ ಎನ್‌ಎಲ್‌ಡಿ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುವಂತಹ ಪಕ್ಷವು ಚುನಾವಣಾ ಕಣದಲ್ಲಿಲ್ಲ. ಮಯನ್ಮಾರ್‌ನ ಹಲವು ಭಾಗಗಳಲ್ಲಿ ಸೂಕಿ ಅವರನ್ನು ಆರಾಧಿಸುವ ಜನರಿದ್ದಾರೆ. ಅವರೆಲ್ಲಾ ಎನ್‌ಎಲ್‌ಡಿ ಬೆನ್ನಿಗೆ ನಿಲ್ಲುವುದು ಖಚಿತ. ಹೀಗಾಗಿ ಸೂಕಿ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ’ ಎಂದು ಯಾಂಗೂನ್ ಮೂಲದ ರಾಜಕೀಯ ವಿಶ್ಲೇಷಕ ರಿಚರ್ಡ್ ಹಾರ್ಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.