ಕಾಬೂಲ್: ಅಫ್ಗಾನಿಸ್ತಾನದ ಸಂಗೀತಗಾರರೊಬ್ಬರ ಸಂಗೀತದ ಉಪಕರಣಗಳನ್ನು ತಾಲಿಬಾನಿಗಳು ಸಾರ್ವಜನಿಕವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಅಫ್ಗಾನಿಸ್ತಾನದ ಪಕ್ತಿಯಾ ಪ್ರಾಂತ್ಯದ ಜಾಜೈ ಅರಬ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಅಲ್ಲಿನ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತಕ್ಕೆ ಅವಕಾಶ ಇಲ್ಲ ಎಂದು ಸಂಗೀತಗಾರನ ಎದುರೇ ಅವರ ಉಪಕರಣವನ್ನು ತಾಲಿಬಾನಿಗಳು ಸುಟ್ಟು ಹಾಕಿದ್ದಾರೆ. ಈ ವೇಳೆ ಅವರು ಮದುವೆ ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಸಂಗೀತಗಾರ ಅಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದರೆ, ಸ್ಥಳದಲ್ಲಿದ್ದ ತಾಲಿಬಾನಿಗಳು ಗಹಗಹಿಸಿ ನಗುತ್ತಿರುವುದು ಕಂಡು ಬಂದಿದೆ.

ಇತ್ತೀಚೆಗಷ್ಟೆ ಬಟ್ಟೆ ಅಂಗಡಿಗಳಲ್ಲಿ ಗೊಂಬೆಗಳನ್ನು ಶಿರಚ್ಚೇಧನ ಮಾಡಿ ತಾಲಿಬಾನಿಗಳು ಅಟ್ಟಹಾಸ ಮೆರೆದಿದ್ದರು.

ಅಫ್ಗನ್ಗೆ ಪಾಕಿಸ್ತಾನದ ನೆರವು ಬೇಕಾಗಿಲ್ಲ ಎಂದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.