ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಮಕ್ಕಳಿಗೆ ವಿಷವುಣಿಸಿದ ಶಿಕ್ಷಕಿಗೆ ಮರಣದಂಡನೆ

ಹಾಂಕಾಂಗ್‌: ಸಹೋದ್ಯೋಗಿಯೊಂದಿಗೆ ದ್ವೇಷ;
Last Updated 30 ಸೆಪ್ಟೆಂಬರ್ 2020, 9:33 IST
ಅಕ್ಷರ ಗಾತ್ರ

ಹಾಂಕಾಂಗ್: ತನ್ನ ಸಹೋದ್ಯೋಗಿಯೊಂದಿಗಿದ್ದ ಮನಸ್ತಾಪದ ಕಾರಣ, 25 ಮಕ್ಕಳಿಗೆ ವಿಷವುಣಿಸಿ, ಒಬ್ಬರನ್ನು ಕೊಂದ ಆರೋಪದ ಮೇಲೆ ಮಧ್ಯ ಕಿಂಡನ್‌ಗಾರ್ಟನ್‌ ಶಿಕ್ಷಕಿಯೊಬ್ಬರಿಗೆ ಚೀನಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಶಿಕ್ಷಕಿ ವಾಂಗ್‌ ಯುನ್‌ ಮರದಂಡನೆ ಶಿಕ್ಷೆಗೆ ಗುರಿಯಾದವರು. ಅವರು ಮಾ.27, 2019ರಂದು ಶಾಲೆಯಲ್ಲಿ ಮಕ್ಕಳು ಸೇವಿಸುವ ಗಂಜಿಗೆ (ಉಪಹಾರಕ್ಕೆ) ನೈಟ್ರೇಟ್ ರಾಸಾಯನಿಕ‌ ಬೆರೆಸಿದ್ದರು ಎಂದು ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್‌ಮೀಡಿಯಟ್ ಪೀಪಲ್ಸ್‌ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವಾಂಗ್‌ಯುನ್‌, ತನ್ನ ಸಹಶಿಕ್ಷಕರೊಬ್ಬರೊಂದಿಗೆಮನಸ್ತಾಪ ಹೊಂದಿದ್ದ ಕಾರಣ, ಇವರು ತನ್ನ ಪ್ರತಿಸ್ಪರ್ಧಿ ಶಾಲೆಯ ಮಕ್ಕಳಿಗೆ ವಿಷವುಣಿಸಿದ್ದರು ಎಂದು ನ್ಯಾಯಾಲಯ ಹೇಳಿದೆ.

ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ಮಗು ಸಾವನ್ನಪ್ಪಿ,ಉಳಿದಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT