ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಪ್ರಯಾಣಿಕರಿಗೆ ಚಿತ್ರಹಿಂಸೆ, ಬಸ್‌ಗೆ ಬೆಂಕಿ ಹಚ್ಚಿದ ಭಯೋತ್ಪಾದಕರು

Published 26 ಮೇ 2024, 13:15 IST
Last Updated 26 ಮೇ 2024, 13:15 IST
ಅಕ್ಷರ ಗಾತ್ರ

ಪೆಶಾವರ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೆಹ್ರೀಕ್‌ ಎ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಸಂಘಟನೆಯ ಭಯೋತ್ಪಾದಕರು, ಬಸ್‌ವೊಂದರಲ್ಲಿ ಇದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ಬಸ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ದ್ರಾಜಿಂಡಾದಿಂದ ಡೇರಾ ಇಸ್ಮಾಯಿಲ್‌ ಖಾನ್‌ಗೆ ಶನಿವಾರ ತೆರಳುತ್ತಿದ್ದ ಬಸ್‌ ಅನ್ನು ಟಿಟಿಪಿ ಭಯೋತ್ಪಾದಕರು ದಾರಬನ್‌ ತೆಹಸಿಲ್‌ ಪ್ರದೇಶದಲ್ಲಿ ತಡೆದು, ಪ್ರಯಾಣಿಕರನ್ನು ಬಲವಂತವಾಗಿ ಕಳೆಗಿಳಿಸಿದ್ದಾರೆ. ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಲ್ಲದೆ, ಹಿಂಸೆಯನ್ನೂ ನೀಡಿದ್ದಾರೆ. ನಂತರ ಖಾಲಿ ಬಸ್‌ ಅನ್ನು ಸುಟ್ಟು, ಬೂದಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್‌ ಆದಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪರಿಸ್ಥಿತಿ ನಿಯಂತ್ರಿಸಲು ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT