ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಬಳಕೆಯ ಇ–ಸಿಗರೇಟ್‌ ನಿಷೇಧಕ್ಕೆ ಬ್ರಿಟನ್ ಚಿಂತನೆ 

Published 29 ಜನವರಿ 2024, 15:46 IST
Last Updated 29 ಜನವರಿ 2024, 15:46 IST
ಅಕ್ಷರ ಗಾತ್ರ

ಲಂಡನ್: ಮಕ್ಕಳು ನಿಕೋಟಿನ್‌ ವ್ಯಸನಿಗಳಾಗುವುದನ್ನು ತಪ್ಪಿಸಲು ಏಕಬಳಕೆಯ ಇ-ಸಿಗರೇಟ್ ಮತ್ತಿತರ ಸಾಧನಗಳನ್ನು ನಿಷೇಧಿಸಲು ಬ್ರಿಟನ್ ಮುಂದಾಗಿದೆ.

ಬ್ರಿಟನ್‌ನಲ್ಲಿ ಸದ್ಯ 18 ವರ್ಷಕ್ಕಿಂತ ಕಿರಿಯರಿಗೆ ಇ-ಸಿಗರೇಟ್ ಮತ್ತು ತಂಬಾಕು ಮಾರಾಟ ಮಾಡುವುದು ಅಕ್ರಮವಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಯುವಜನರ ಇ-ಸಿಗರೇಟ್ ಬಳಕೆ ಮೂರು ಪಟ್ಟು ಹೆಚ್ಚಾಗಿದೆ. ಅಗ್ಗದ ಮತ್ತು ಬಣ್ಣ ಬಣ್ಣದ ಇ-ಸಿಗರೇಟ್‌ಗಳು ಯುವಜನತೆಯ ಪಾಲಿಗೆ ಆಕರ್ಷಣೆಯಾಗಿವೆ.  

ಏಕಬಳಕೆ ಇ-ಸಿಗರೇಟ್‌ ನಿಷೇಧಿಸುವುದರ ಜೊತೆಗೆ ಮಕ್ಕಳನ್ನು ಸೆಳೆಯಲು ವಿವಿಧ ಸುವಾಸನೆಗಳನ್ನು ಬೀರುವ ವಸ್ತುಗಳನ್ನು ಬಳಸಲಾಗುತ್ತಿದ್ದು, ಅವಕ್ಕೆ ಮಿತಿ ಹೇರಲಾಗುತ್ತದೆ. ಹಾಗೆಯೇ ಅವುಗಳ ಪ್ಯಾಕೆಟ್‌ಗಳನ್ನು ಕಣ್ಮನ ಸೆಳೆಯದಂತೆ ರೂಪಿಸಲು ಸೂಚಿಸಲಾಗುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT