ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್ಒ) ಅಮೆರಿಕ ಹೊರಬರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.

ಕೋವಿಡ್–19 ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯುಎಚ್ಒ ವಿಫಲವಾಗಿದೆ ಎಂದ ಟ್ರಂಪ್, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ. ಡಬ್ಲ್ಯುಎಚ್ಒ ನಮ್ಮನ್ನು ಅಳಿಸಿ ಹಾಕಲು ನೋಡಿತು, ಎಲ್ಲರೂ ನಮ್ಮನ್ನು ತುಳಿಯಲು ನೋಡಿದರು, ಆದರೆ ಅದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

‘ಮುಂದಿನ 12 ತಿಂಗಳಲ್ಲಿ ಅಮೆರಿಕ ಡಬ್ಲ್ಯುಎಚ್ಒನಿಂದ ಹೊರಬರಲಿದೆ. ಜತೆಗೆ ಡಬ್ಲ್ಯುಎಚ್ಒಗೆ ನೀಡುತ್ತಿದ್ದ ಹಣಕಾಸಿನ ನೆರವನ್ನು ನಿಲ್ಲಿಸಲಿದೆ. ಸಂಸ್ಥೆಯಿಂದ ಹೊರಬರುವ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಲಿದೆ. ಅಲ್ಲದೆ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುವುದು, ಸಂಸ್ಥೆಯೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸಲು ಪಾಲುದಾರರನ್ನು ಮರು ನೇಮಕ ಮಾಡಲಾಗುವುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಟ್ರಂಪ್ ಅವರ ಆದೇಶದ ಕುರಿತು ಡಬ್ಲ್ಯುಎಚ್ಒ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕವು ಡಬ್ಲ್ಯುಎಚ್ಒ ಅತಿದೊಡ್ಡ ಆರ್ಥಿಕ ಬೆಂಬಲವಾಗಿತ್ತು. ಡಬ್ಲ್ಯುಎಚ್ಒನ ಒಟ್ಟು ನಿಧಿಯ ಶೇ 18ರಷ್ಟು ಕೊಡುಗೆಯನ್ನು ಅಮೆರಿಕ ನೀಡುತ್ತಿತ್ತು.

ಅಮೆರಿಕದ ಈ ಕ್ರಮವು ಕ್ಷಯ, ಎಚ್ಐವಿ ಅಥವಾ ಏಡ್ಸ್ ಸೇರಿ ಇತರ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ಡಬ್ಲ್ಯುಎಚ್ಒ ತೊಂದರೆ ಅನುಭವಿಸಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
.ವಲಸಿಗರಿಗೆ ವರವಾಗಿದ್ದ ‘ಸಿಬಿಪಿ ಒನ್’ ಆ್ಯಪ್ ಸ್ಥಗಿತಗೊಳಿಸಿದ ಟ್ರಂಪ್.ಅಮೆರಿಕ | ಟಿಕ್ಟಾಕ್ ಕಾರ್ಯಾಚರಣೆ 75 ದಿನ ವಿಸ್ತರಣೆ: ಟ್ರಂಪ್.ಟ್ರಂಪ್ ಪ್ರಮಾಣವಚನ; ಕುಣಿದು ಕುಪ್ಪಳಿಸಿದ ಎಲಾನ್ ಮಸ್ಕ್: ವಿಡಿಯೊ ನೋಡಿ.ಟ್ರಂಪ್ ಎರಡನೇ ಅವಧಿ ಶುರು: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.
ಟ್ರಂಪ್ ನಿಲುವಿನ ಪರಿಣಾಮ

ಲಂಡನ್ (ರಾಯಿಟರ್ಸ್): ಡಬ್ಲ್ಯುಎಚ್ಒದಿಂದ ಅಮೆರಿಕ ಹೊರ ಬರುವ ಕುರಿತು ಅಧ್ಯಕ್ಷ ಟ್ರಂಪ್ ಕೈಗೊಂಡಿರುವ ನಿರ್ಧಾರವು, ಸಂಸ್ಥೆಯ ಕಾರ್ಯಾಚರಣೆ ಕುರಿತು ಹಲವು ಪ್ರಶ್ನೆಗಳನ್ನು ಮೂಡಿಸಿದೆ.

ಡಬ್ಲ್ಯುಎಚ್ಒಗೆ ಹರಿದು ಬರುವ ಹಣಕಾಸು ನೆರವಿನಲ್ಲಿ ಅಮೆರಿಕದ ಪಾಲು ದೊಡ್ಡದು. ಈ ನೆರವು ನಿಂತಲ್ಲಿ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಹಿನ್ನಡೆ ಆಗಲಿದೆ ಎಂಬ ಆತಂಕ ಮನೆ ಮಾಡಿದೆ.

ಗಾಜಾ ಪಟ್ಟಿ, ಉಕ್ರೇನ್ನಲ್ಲಿ ಯುದ್ಧದಿಂದಾಗಿ ಉದ್ಭವಿಸಿದ ಆರೋಗ್ಯ ತುರ್ತುಗಳಿಗೆ ಅಪಾರ ಹಣದ ಅಗತ್ಯವಿದ್ದು, 2024–25ನೇ ಸಾಲಿಗೆ 6.8 ಶತಕೋಟಿ ಡಾಲರ್ (ಅಂದಾಜು ₹60 ಸಾವಿರ ಕೋಟಿ) ಮೊತ್ತದ ಬಜೆಟ್ ಅನ್ನು ಡಬ್ಲ್ಯುಎಚ್ಒ ಸಿದ್ಧಪಡಿಸಿದೆ. ಈಗ ಈ ಹಣಕಾಸು ನೆರವಿನ ಮೇಲೆ ಅನಿಶ್ಚಿತತೆ ಸೃಷ್ಟಿಯಾಗಿದೆ.

ಕೋವಿಡ್–19 ಪಿಡುಗಿನ ನಂತರ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಿಸಲು ಮಾಡಿಕೊಂಡಿರುವ ಒಪ್ಪಂದ ಬಗ್ಗೆಯೂ ಟ್ರಂಪ್ ಸಂದೇಹ ವ್ಯಕ್ತಪಡಿಸಿದ್ದಾರೆ. ಈಗ, ಈ ಕಾರ್ಯಕ್ರಮಕ್ಕೂ ನೆರವು ಸ್ಥಗಿತಗೊಳ್ಳಲಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಕಂಡುಬರುತ್ತಿರುವ ಇನ್ಫ್ಲೂಯೆಂಜಾ ಮೇಲೆ ನಿಗಾ ಇಡುವುದಕ್ಕೆ ಡಬ್ಲ್ಯುಎಚ್ಒ ಕಾರ್ಯಕ್ರಮ ರೂಪಿಸಿದೆ. ಏಡ್ಸ್ ವಿರುದ್ಧದ ಹೋರಾಟ, ವಿವಿಧ ಲಸಿಕೆಗಳ ಅಭಿವೃದ್ಧಿ ಮತ್ತು ಸಂಶೋಧನೆಗೂ ಹಣಕಾಸಿನ ಅಡಚಣೆ ಉಂಟಾಗುವ ಆತಂಕ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.