ವಾಷಿಂಗ್ಟನ್: ‘ಅಮೆರಿಕದ ಸುವರ್ಣಯುಗ ಇದೀಗ ಪ್ರಾರಂಭವಾಗಿದೆ. ಅಮೆರಿಕವನ್ನು ಮತ್ತೆ ಜಗತ್ತಿನ ಶ್ರೇಷ್ಠ ರಾಷ್ಟ್ರವನ್ನಾಗಿಸಲು ದೇವರು ನನ್ನನ್ನು ಕಾಪಾಡಿದ್ದಾನೆ’ ಎನ್ನುವ ಮೂಲಕ ಜಗತ್ತಿನ ದೊಡಣ್ಣ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಟ್ರಂಪ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಒಡೆಯ ಎಲಾನ್ ಮಸ್ಕ್ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಟ್ರಂಪ್ ಪ್ರಮಾಣ ವಚನಕ್ಕೂ ಮುನ್ನ ನಡೆದ ರ್ಯಾಲಿಯಲ್ಲಿ ಎಲಾನ್ ಮಸ್ಕ್ ಕುಣಿದು ಕುಪ್ಪಳಿಸಿದ್ದಾರೆ. ಬಿಗಿಮುಷ್ಟಿ ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಸ್ಕ್ ನೋಡಿ ನೆರೆದಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

ಬಳಿಕ ಮಾತನಾಡಿದ ಮಸ್ಕ್ ಗಗನಯಾತ್ರಿಗಳನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಬಗ್ಗೆ ಭರವಸೆ ನೀಡಿದ ಟ್ರಂಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಇದು ಸಾಮಾನ್ಯ ವಿಜಯವಲ್ಲ. ಚುನಾವಣೆ ನಡೆಯುತ್ತಲೇ ಇರುತ್ತದೆ. ಆದರೆ ಈ ಜಯ ಮಾನವ ನಾಗರಿಕತೆಯಲ್ಲಿ ಹೊಸ ದಾರಿ ಸೃಷ್ಟಿಸಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಮೆರಿಕದ ಗಗನಯಾತ್ರಿಗಳು ಮೊದಲ ಬಾರಿಗೆ ಮತ್ತೊಂದು ಗ್ರಹದಲ್ಲಿ ಧ್ವಜವನ್ನು ಹಾರಿಸುವುದು ಎಂದರೆ ನಿಜಕ್ಕೂ ಅದ್ಭುತ ವಿಚಾರವಾಗಿದೆ’ ಎಂದರು.
.ಟ್ರಂಪ್ ಎರಡನೇ ಅವಧಿ ಶುರು: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.ಅಮೆರಿಕ | ಟಿಕ್ಟಾಕ್ ಕಾರ್ಯಾಚರಣೆ 75 ದಿನ ವಿಸ್ತರಣೆ: ಟ್ರಂಪ್.ಅಮೆರಿಕದಲ್ಲಿರುವುದು ‘ಗಂಡು ಮತ್ತು ಹೆಣ್ಣು’ ಎರಡೇ ಲಿಂಗ: ಟ್ರಂಪ್.ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.