ವಾಷಿಂಗ್ಟನ್: ಚೀನಾ ಮೂಲದ ಕಿರು ವಿಡಿಯೊ ಆ್ಯಪ್ ಟಿಕ್ಟಾಕ್ ಕಾರ್ಯಾಚರಣೆಯನ್ನು 75 ದಿನಗಳವರೆಗೆ ವಿಸ್ತರಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ.

ಅಮೆರಿಕದಾದ್ಯಂತ ಸುಮಾರು 17 ಕೊಟಿ (170 ಮಿಲಿಯನ್) ಟಿಕ್ಟಾಕ್ ಬಳಕೆದಾರರಿದ್ದಾರೆ.

‘ಇಂದಿನಿಂದ 75 ದಿನಕ್ಕೆ ಈ ಕಾಯ್ದೆಯನ್ನು ಜಾರಿಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಟಾರ್ನಿ ಜನರಲ್ಗೆ ಸೂಚನೆ ನೀಡುತ್ತಿದ್ದೇನೆ. ನನ್ನ ಆಡಳಿತವು ಕೋಟ್ಯಂತರ ಅಮೆರಿಕನ್ನರ ಸಂವಹನ ವೇದಿಕೆಯ ಹಠಾತ್ ಸ್ಥಗಿತವನ್ನು ತಡೆದು ದೇಶದ ಭದ್ರತೆಯನ್ನು ರಕ್ಷಿಸುತ್ತಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಕಳೆದ ವರ್ಷ ಏಪ್ರಿಲ್ನಲ್ಲಿ ಬೈಡನ್ ಸರ್ಕಾರ ಟಿಕ್ಟಾಕ್ನಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ನಿಷೇಧದ ಮಸೂದೆಯನ್ನು ಜಾರಿಗೆ ತಂದಿತ್ತು. ಇದು ಸೆನಟ್ನಲ್ಲಿ ಬಹುಮತವನ್ನೂ ಪಡೆದುಕೊಂಡಿತ್ತು. ಮಸೂದೆಯ ಪ್ರಕಾರ ಟಿಕ್ಟಾಕ್ನ ಮೂಲ ಕಂಪನಿ ಬೈಟ್ಡ್ಯಾನ್ಸ್ಗೆ ಈ ಆ್ಯಪ್ಅನ್ನು ಅಮೆರಿಕದ ಅಪ್ಲಿಕೇಷನ್ ಸ್ಟೋರ್ಗಳಿಂದ ಹೊರಹಾಕಲು 270 ದಿನಗಳ ಅವಕಾಶ ನೀಡಿತ್ತು. ಅದು ಜ.19 ರಂದು ಕೊನೆಗೊಂಡಿದೆ.
.ಟಿಕ್ ಟಾಕ್ ಮೇಲಿನ ನಿಷೇಧ ಹಿಂಪಡೆದ ಟ್ರಂಪ್: ಕಾರ್ಯ ಪುನರಾರಂಭಿಸಿದ ಆ್ಯಪ್.
ಆದರೆ ಇದೇ ವೇಳೆ ಅಧಿಕಾರಕ್ಕೆ ಬಂದ ಟ್ರಂಪ್ ಈಗ ಮತ್ತೆ ಟಿಕ್ಟಾಕ್ ಬಳಕೆಗೆ ಅವಕಾಶ ನೀಡಿದ್ದಾರೆ.

‘ದೇಶದ ಭದ್ರತೆ, ವಿದೇಶಾಂಗ ನೀತಿ ಮತ್ತು ಇತರ ಪ್ರಮುಖ ಕಾರ್ಯಕಾರಿ ಕೆಲಸಗಳಿಗೆ ನನ್ನ ಮೇಲೆ ಸಾಂವಿಧಾನಿಕ ಜವಾಬ್ದಾರಿಯಿದೆ. ಆ ಜವಾಬ್ದಾರಿಯಲ್ಲಿ ಪೂರೈಸಲು ಅಮೆರಿಕನ್ನರು ಬಳಸುವ ಟಿಕ್ಟಾಕ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮಾಡುತ್ತಿದೆ ಎನ್ನುವ ವಿಚಾರದ ಬಗ್ಗೆ ನನ್ನ ಸಲಹೆಗಾರರೊಂದಿಗೆ ಸಮಾಲೋಚಿಸಲು ಉದ್ದೇಶಿಸಿದ್ದೇನೆ. ಇದಕ್ಕಾಗಿ ಟಿಕ್ಟಾಕ್ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನನ್ನ ಆಡಳಿತದಲ್ಲಿನ ಅಧಿಕಾರಿಗಳು ಮೌಲ್ಯಮಾಪನ ಮಾಡಬೇಕು’ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
.ಅಮೆರಿಕದಲ್ಲಿ ಟಿಕ್ ಟಾಕ್ ಆ್ಯಪ್ ಕಾರ್ಯ ಸ್ಥಗಿತ.ಟಿಕ್ಟಾಕ್ ಮೇಲಿನ ನಿಷೇಧ ವಾಪಸ್; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.